bi

href="http://www.freebiebitcoin.com">Earn

Wednesday, February 9, 2011

ಅಮೇರಿಕಾದಲ್ಲಿ ಭಾರತೀಯ ವಿಧ್ಯಾರ್ಥಿಗಳಿಗೆ ನಾಯಿಪಟ್ಟಿ

ಅಮೇರಿಕದಲ್ಲಿ ಭಾರತಿಯ ವಿಧ್ಯಾರ್ಥಿಗಳಿಗೆ ಜಿ.ಪಿ.ಆರ್.ಸ್ ಪಟ್ಟಿಗಳನ್ನು ಕಟ್ಟಿ ವಲಸೆ ಹೋಗದಂತೆ ಕಾವಲು ಕಾಯುತ್ತಿರುವುದು ಇಂದು ಬಹು ಚರ್ಚಿತ ಸುಧ್ಧಿ .ಈ ಕುರಿತು ಉಬಯ ಧೇಶಗಳು ಪರಸ್ಪರ ದೋಶಾರೋಪಣೆಯಲ್ಲಿ ನಿರತವಾಗಿದೆ.ಯಾರು ವಿಧ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿಸದೆ ಕೇವಲ ಸ್ವಯಂ ಪ್ರತಿಷ್ಟೆ ಗಾಗಿ  ಹೇಳಿಕೆ ನೀಡುತ್ತಿರುವುದು ವಿಶಾಧನೀಯವಾದರು, ಇದು ವಿಧ್ಯಾರ್ಥಿಗಳ ಯಾ ಪೋಶಕರ ಸ್ವಯಂಕ್ರತ ಅಪರಾಧ.ಏಕೆಂದರೆ ವಿಧೇಶಿ ವ್ಯಾಮೋಹಕ್ಕೆ ಬಿದ್ದ ನಾವು ಅದಕ್ಕಾಗಿ ಯಾವುದೇ ಅಡ್ಡದಾರಿಯನ್ನಾದರು ತುಳಿಯಲು ತಯಾರಾಗಿದ್ದೆವೆ, ಹಾಗಾಗಿ ಅದರ ಪ್ರತಿಪಲ ಅನುಬವಿಸುತ್ತಿದ್ದೆವೆ.                                               
       ಅದೇನೆ ಇರಲಿ ನಾನು ಇಲ್ಲಿ ಚರ್ಚಿಸ ಹೊರಟಿರುವುದು ಪ್ರತಿಭಾಪಲಾಯನ ಹಾಗು ಸ್ವಾಭಿಮಾನದ ಬಗ್ಗೆ.
ಪ್ರತಿಭಾಪಲಾಯನವು  ಪುರಾಣ ಕಾಲದಿಂದಲು ನಡೆದು ಬಂದ ಪ್ರಕ್ರಿಯೆ, ರಾಮಾಯಣ ಮಹಾಭಾರತ ಕಾಲದಲ್ಲಿಯು ನಡೆದ ಉದಾಹರಣೆಗಳಿವೆ.ಅದರೆ ಅದು ಸಂಧರ್ಬೋಚಿತ ಸ್ವಾಭಿಮಾನಿ ಪಲಾಯನವಾಗಿರುತ್ತಿತ್ತು ಯಾ ದೀನಪಲಾಯನ ಅಂದರೆ ಹೊಟ್ಟೆಪಾಡಿಗಾಗಿರುತ್ತಿತ್ತು  ಆದರೆ
ಇಂದಿನ ಸ್ತಿತಿಯೇ ಬೇರೆ ಹಣ,ಕೀರ್ತಿ-ಪ್ರತಿಷ್ಟೆಯ ಲಾಲಸೆಗೆ ಬಿದ್ದ ನಾವು ವಿಧೇಶಿಪಲಾಯನ ಮಾಡಿ ದೀನರಾಗಿ ಬದುಕುತ್ತಿದ್ದೆವೆ."ಸಾಲಕ್ಕೆ ಬಿದ್ದ ಮನುಷ್ಯ  ನಾಯಿಮರಿಯಂತಾಗುತ್ತಾನೆ" ಯನ್ನುವ ನಾನ್ಣುಡಿ ಇದೆ ,ಇಲ್ಲಿ ಮೋಹಕ್ಕೆ ಬಿದ್ದ ಮನುಷ್ಯ ನಾಯಿಮರಿಯಾಗಿದ್ದಾನೆ
     ಅಮೇರಿಕಾದಂತಹ ಮುಂದುವರಿದ ಪಾಶ್ಚಮಾತ್ಯಧೆಶಗಳಲ್ಲಿ   ಭಾರತಿಯರ  ಕೊಡಿಗೆ ಇರದಿದ್ದಲ್ಲಿ ಅವು ಈ ಮಟ್ಟಕ್ಕೇರಲು ಸಾದ್ಯವಿತ್ತೆ?  ಒಮ್ಮ್ಮೆ ಯೋಚಿಸಿ ನೋಡಿ
ಖಂಡಿತಾ ಸಾದ್ಯವಿರಲಿಲ್ಲ. ಪರರನ್ನೆಲ್ಲ ದೋಚಿ ಪರಾವಲಂಬಿಯಾಗಿಯೇ ಶ್ರೀಮಂತವಾದ  ಧೇಶಗಳಿಂದು ಪ್ರಪಂಚದ ಹಿರಿಯಣ್ಣ!!!!!!!
ವೈದ್ಯರಿಂದ ವಿಜ್ಞಾನಿಗಳವರೆಗೂ ಪ್ರತಿಭಾನ್ವಿತರೆಲ್ಲರು ಭಾರತೀಯರೆ  ಆದರು ಅವರಿಗೆ ಭಾರತೀಯರೆಂದರೆ ತಾತ್ಸಾರ.Inferiority complex ನಿಂದ ಬಳಲುತ್ತಿರುವ ಅಮೇರಿಕಾದ ಇಂದಿನ ಸ್ತಿತಿಯಲ್ಲಿ ನಾವು ಸ್ವಾಭಿಮಾನಿಗಳಾಗಿ ಬದುಕಲು ಸಾದ್ಯವಿದೆಯೆ? ಇದು ಕೇವಲ ಅಮೇರಿಕದ ಸಮಸ್ಯೆಲ್ಲಾ, ಪ್ರಾನ್ಸ್, ಆಸ್ಟ್ರೇಲಿಯಾ,ಸೌದಿ,ಇರಾಣ್,ಇರಾಕ್, ಇಜಿಪ್ತ್,ಚೈನಾದಂತಹ ರಾಷ್ಟ್ರಗಳಲ್ಲಿ ಬಾರತಿಯರ ಬದುಕು ಅತಿಹೀನಾಯ ಸ್ತಿತಿಯಲ್ಲಿದೆ. ಅದರೂ ನಮಗಿದು ಹಣದಮುಂದೆ  ತ್ರಣ ಸಮಾನ!!!  ಜೈ ಹೋ !!!!!!                 

ಉಪ ಸಂಹಾರ
ಈ ಲೇಖನವನ್ನು ಓದಿ  ನಮ್ಮ ವಿಧೇಶಿ ಕನ್ನಡಿಗ ಮಿತ್ರರು ಕೋಪಗೊಳ್ಳ ಬಹುದು,ಇಲ್ಲಿ ಅವಕಾಶಗಳ ಕೊರತೆಯಿದೆ  ನಮ್ಮ ಪ್ರತಿಭೆಗಳಿಗೆ ಬೆಲೆ ದೊರಕುತ್ತಿಲ್ಲ ಯನ್ನುವ ಪಲಾಯನವಾದಿ ಕಾರಣಗಳನ್ನು ನೀಡಬಹುದು. ಒಮ್ಮೆ ವಸ್ತುನಿಷ್ಟವಾಗಿ ಯೋಚಿಸಿ ನೋಡಿ  ಗುಲಾಮಗಿರಿ ಬೇಡವೆಂದು ಸ್ವಾತಂತ್ರ್ಯ ಪಡೆದ ನಾವು ಅಲ್ಲಿಹೋಗಿ   ಗುಲಾಮಗಿರಿ  ಅನುಬವಿಸಬೇಕೆ? ಜೀವನದಲ್ಲಿ ಹಣವೊಂದೇ ಪ್ರಾಮುಖ್ಯವೇ?ಧೇಶ ನಮಗಾಗಿ ಏನು ಮಾಡಿದೆಯನ್ನುವುದಕ್ಕಿಂತ ನಾವು ಧೇಶಕ್ಕಾಗಿ ಏನು ಮಾಡಿದ್ದೇವೆಂದು ಆಲೋಚಿಸೋಣ.ಕೇವಲ ಅವಕಾಶಗಳ ಕೊರತೆಯಿದೆಯಂದಾದರೆ ಅವಕಾಶಗಳನ್ನೆ ಸ್ರಷ್ಟಿಸೋಣ.ಇನ್ಪಿ ನಾರಾಯಣಮೂರ್ತಿಯಂತವರು ಇತಂಹ ಅವಕಾಶಗಳನ್ನು ಸ್ರಷ್ಟಿಸಿಲ್ಲವೇ?  ಈ  ದಿಸೆಯಲ್ಲಿ ಒಂದು ಸಮಾನ ಮನಸ್ಕರ ಗುಂಪು ರಚಿಸಿ ಕಾರ್ಯಪ್ರವರ್ತರಾಗೋಣ.ಪ್ರತಿಭಾಪಲಾಯನ ತಡೆದು ತಲೆಯತ್ತಿ ಬದುಕೋಣ   ಜೈ ಹೋ  !!!!!!!!!!!!!! 


 ಚಿಕ್ಕ ವಾಹನ ಅಫಘಾತದಿಂದಾಗಿ  ೨ವಾರ ಬ್ಲಾಗ್ ಬರೆಯಲಾಗಲಿಲ್ಲ  ಕ್ಷಮೆಯಿರಲಿ