bi

href="http://www.freebiebitcoin.com">Earn

Saturday, October 29, 2011

ಜನುಮದಿನ

ಕಾಲ ಎಷ್ಟುಬೇಗ  ಕಳದೊಗತ್ತೆ ಅಲ್ವಾ !! ಅಡೆ-ತಡೆ  ಇಲ್ದೆ  ಚಲಿಸೂದು ಈ  ಪ್ರಪಂಚದಲ್ಲಿ  ಕಾಲ ಮಾತ್ರ  ಅನಿಸುತ್ತೆ ,ಮೊನ್ನೆ -ಮೊನ್ನೆ  ಬ್ಲಾಗ್ ಮಾಡೋಣ ಅಂತ ಏನೋ ಗೀಚಿದ್ದು ಕಣ್ಣಿಗೆ ಕಟ್ಟಿದಂತಿದೆ,  ಅದಕ್ಕೀಗ  ಮೊದಲ ಜನ್ಮದಾಚರಣೆಯ ಸಂಬ್ರಮ. ಈ ಸಂದರ್ಬದಲ್ಲಿ ನನ್ನ ಬ್ಲಾಗ್ಗೆ ಆಗಮಿಸಿದ, ಸಲಹೆ ಸಹಕಾರ ನೆಡಿದ ಎಲ್ಲ  ಓದುಗಮಿತ್ರರಿಗೂ ಹಿತೈಶಿಗಲಿಗು ಧನ್ಯವಾದಗಳು. ನಿಮ್ಮ ಸಲೆಹೆ- ಸೂಚನೆಗಳಿಗೆ  ನಾನು ಚಿರಋಣಿ ಇನ್ನು ಮುಂದೆ ಸಹ ನಿಮ್ಮ ಪ್ರೋತ್ಸಾಹವನ್ನು ಆಶಿಸುತ್ತೇನೆ 
ಈ ನಡುವೆ ಕೆಲವು ವಯಕ್ತಿಕ ಕಾರಣಗಳಿಂದ ಬ್ಲಾಗ್ ಬರೆಯಲಾಗಲಿಲ್ಲ  ಕ್ಷಮೆ ಇರಲಿ , ಸದ್ಯದಲ್ಲೇ ನೀವು ನಿರೀಕ್ಷಿಸುತ್ತಿರುವ          
                       ದಿ ಗ್ರೇಟ್ ನೆಹರು ಬ್ಲಂಡರ್ಸ್!!, ಅಗೊರಿಗಳ ನಡುವೆ , ಡಾಕ್ಟರ್ಸ್ ಡೈರಿ  ಬರೆಯುತ್ತೇನೆ    
               ಪ್ರೀತಿ ಇರಲಿ  
ಇನ್ನೊಮೆ  ದನ್ಯವಾದಗಳನ್ನು   ಅರ್ಪಿಸುತ್ತ 
ಪ್ರೀತಿಯಿಂದ   ನಿಮ್ಮ   ಸಂತೋಷ್ ಹೆಗಡೆ 

 





 

Wednesday, February 9, 2011

ಅಮೇರಿಕಾದಲ್ಲಿ ಭಾರತೀಯ ವಿಧ್ಯಾರ್ಥಿಗಳಿಗೆ ನಾಯಿಪಟ್ಟಿ

ಅಮೇರಿಕದಲ್ಲಿ ಭಾರತಿಯ ವಿಧ್ಯಾರ್ಥಿಗಳಿಗೆ ಜಿ.ಪಿ.ಆರ್.ಸ್ ಪಟ್ಟಿಗಳನ್ನು ಕಟ್ಟಿ ವಲಸೆ ಹೋಗದಂತೆ ಕಾವಲು ಕಾಯುತ್ತಿರುವುದು ಇಂದು ಬಹು ಚರ್ಚಿತ ಸುಧ್ಧಿ .ಈ ಕುರಿತು ಉಬಯ ಧೇಶಗಳು ಪರಸ್ಪರ ದೋಶಾರೋಪಣೆಯಲ್ಲಿ ನಿರತವಾಗಿದೆ.ಯಾರು ವಿಧ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿಸದೆ ಕೇವಲ ಸ್ವಯಂ ಪ್ರತಿಷ್ಟೆ ಗಾಗಿ  ಹೇಳಿಕೆ ನೀಡುತ್ತಿರುವುದು ವಿಶಾಧನೀಯವಾದರು, ಇದು ವಿಧ್ಯಾರ್ಥಿಗಳ ಯಾ ಪೋಶಕರ ಸ್ವಯಂಕ್ರತ ಅಪರಾಧ.ಏಕೆಂದರೆ ವಿಧೇಶಿ ವ್ಯಾಮೋಹಕ್ಕೆ ಬಿದ್ದ ನಾವು ಅದಕ್ಕಾಗಿ ಯಾವುದೇ ಅಡ್ಡದಾರಿಯನ್ನಾದರು ತುಳಿಯಲು ತಯಾರಾಗಿದ್ದೆವೆ, ಹಾಗಾಗಿ ಅದರ ಪ್ರತಿಪಲ ಅನುಬವಿಸುತ್ತಿದ್ದೆವೆ.                                               
       ಅದೇನೆ ಇರಲಿ ನಾನು ಇಲ್ಲಿ ಚರ್ಚಿಸ ಹೊರಟಿರುವುದು ಪ್ರತಿಭಾಪಲಾಯನ ಹಾಗು ಸ್ವಾಭಿಮಾನದ ಬಗ್ಗೆ.
ಪ್ರತಿಭಾಪಲಾಯನವು  ಪುರಾಣ ಕಾಲದಿಂದಲು ನಡೆದು ಬಂದ ಪ್ರಕ್ರಿಯೆ, ರಾಮಾಯಣ ಮಹಾಭಾರತ ಕಾಲದಲ್ಲಿಯು ನಡೆದ ಉದಾಹರಣೆಗಳಿವೆ.ಅದರೆ ಅದು ಸಂಧರ್ಬೋಚಿತ ಸ್ವಾಭಿಮಾನಿ ಪಲಾಯನವಾಗಿರುತ್ತಿತ್ತು ಯಾ ದೀನಪಲಾಯನ ಅಂದರೆ ಹೊಟ್ಟೆಪಾಡಿಗಾಗಿರುತ್ತಿತ್ತು  ಆದರೆ
ಇಂದಿನ ಸ್ತಿತಿಯೇ ಬೇರೆ ಹಣ,ಕೀರ್ತಿ-ಪ್ರತಿಷ್ಟೆಯ ಲಾಲಸೆಗೆ ಬಿದ್ದ ನಾವು ವಿಧೇಶಿಪಲಾಯನ ಮಾಡಿ ದೀನರಾಗಿ ಬದುಕುತ್ತಿದ್ದೆವೆ."ಸಾಲಕ್ಕೆ ಬಿದ್ದ ಮನುಷ್ಯ  ನಾಯಿಮರಿಯಂತಾಗುತ್ತಾನೆ" ಯನ್ನುವ ನಾನ್ಣುಡಿ ಇದೆ ,ಇಲ್ಲಿ ಮೋಹಕ್ಕೆ ಬಿದ್ದ ಮನುಷ್ಯ ನಾಯಿಮರಿಯಾಗಿದ್ದಾನೆ
     ಅಮೇರಿಕಾದಂತಹ ಮುಂದುವರಿದ ಪಾಶ್ಚಮಾತ್ಯಧೆಶಗಳಲ್ಲಿ   ಭಾರತಿಯರ  ಕೊಡಿಗೆ ಇರದಿದ್ದಲ್ಲಿ ಅವು ಈ ಮಟ್ಟಕ್ಕೇರಲು ಸಾದ್ಯವಿತ್ತೆ?  ಒಮ್ಮ್ಮೆ ಯೋಚಿಸಿ ನೋಡಿ
ಖಂಡಿತಾ ಸಾದ್ಯವಿರಲಿಲ್ಲ. ಪರರನ್ನೆಲ್ಲ ದೋಚಿ ಪರಾವಲಂಬಿಯಾಗಿಯೇ ಶ್ರೀಮಂತವಾದ  ಧೇಶಗಳಿಂದು ಪ್ರಪಂಚದ ಹಿರಿಯಣ್ಣ!!!!!!!
ವೈದ್ಯರಿಂದ ವಿಜ್ಞಾನಿಗಳವರೆಗೂ ಪ್ರತಿಭಾನ್ವಿತರೆಲ್ಲರು ಭಾರತೀಯರೆ  ಆದರು ಅವರಿಗೆ ಭಾರತೀಯರೆಂದರೆ ತಾತ್ಸಾರ.Inferiority complex ನಿಂದ ಬಳಲುತ್ತಿರುವ ಅಮೇರಿಕಾದ ಇಂದಿನ ಸ್ತಿತಿಯಲ್ಲಿ ನಾವು ಸ್ವಾಭಿಮಾನಿಗಳಾಗಿ ಬದುಕಲು ಸಾದ್ಯವಿದೆಯೆ? ಇದು ಕೇವಲ ಅಮೇರಿಕದ ಸಮಸ್ಯೆಲ್ಲಾ, ಪ್ರಾನ್ಸ್, ಆಸ್ಟ್ರೇಲಿಯಾ,ಸೌದಿ,ಇರಾಣ್,ಇರಾಕ್, ಇಜಿಪ್ತ್,ಚೈನಾದಂತಹ ರಾಷ್ಟ್ರಗಳಲ್ಲಿ ಬಾರತಿಯರ ಬದುಕು ಅತಿಹೀನಾಯ ಸ್ತಿತಿಯಲ್ಲಿದೆ. ಅದರೂ ನಮಗಿದು ಹಣದಮುಂದೆ  ತ್ರಣ ಸಮಾನ!!!  ಜೈ ಹೋ !!!!!!                 

ಉಪ ಸಂಹಾರ
ಈ ಲೇಖನವನ್ನು ಓದಿ  ನಮ್ಮ ವಿಧೇಶಿ ಕನ್ನಡಿಗ ಮಿತ್ರರು ಕೋಪಗೊಳ್ಳ ಬಹುದು,ಇಲ್ಲಿ ಅವಕಾಶಗಳ ಕೊರತೆಯಿದೆ  ನಮ್ಮ ಪ್ರತಿಭೆಗಳಿಗೆ ಬೆಲೆ ದೊರಕುತ್ತಿಲ್ಲ ಯನ್ನುವ ಪಲಾಯನವಾದಿ ಕಾರಣಗಳನ್ನು ನೀಡಬಹುದು. ಒಮ್ಮೆ ವಸ್ತುನಿಷ್ಟವಾಗಿ ಯೋಚಿಸಿ ನೋಡಿ  ಗುಲಾಮಗಿರಿ ಬೇಡವೆಂದು ಸ್ವಾತಂತ್ರ್ಯ ಪಡೆದ ನಾವು ಅಲ್ಲಿಹೋಗಿ   ಗುಲಾಮಗಿರಿ  ಅನುಬವಿಸಬೇಕೆ? ಜೀವನದಲ್ಲಿ ಹಣವೊಂದೇ ಪ್ರಾಮುಖ್ಯವೇ?ಧೇಶ ನಮಗಾಗಿ ಏನು ಮಾಡಿದೆಯನ್ನುವುದಕ್ಕಿಂತ ನಾವು ಧೇಶಕ್ಕಾಗಿ ಏನು ಮಾಡಿದ್ದೇವೆಂದು ಆಲೋಚಿಸೋಣ.ಕೇವಲ ಅವಕಾಶಗಳ ಕೊರತೆಯಿದೆಯಂದಾದರೆ ಅವಕಾಶಗಳನ್ನೆ ಸ್ರಷ್ಟಿಸೋಣ.ಇನ್ಪಿ ನಾರಾಯಣಮೂರ್ತಿಯಂತವರು ಇತಂಹ ಅವಕಾಶಗಳನ್ನು ಸ್ರಷ್ಟಿಸಿಲ್ಲವೇ?  ಈ  ದಿಸೆಯಲ್ಲಿ ಒಂದು ಸಮಾನ ಮನಸ್ಕರ ಗುಂಪು ರಚಿಸಿ ಕಾರ್ಯಪ್ರವರ್ತರಾಗೋಣ.ಪ್ರತಿಭಾಪಲಾಯನ ತಡೆದು ತಲೆಯತ್ತಿ ಬದುಕೋಣ   ಜೈ ಹೋ  !!!!!!!!!!!!!! 


 ಚಿಕ್ಕ ವಾಹನ ಅಫಘಾತದಿಂದಾಗಿ  ೨ವಾರ ಬ್ಲಾಗ್ ಬರೆಯಲಾಗಲಿಲ್ಲ  ಕ್ಷಮೆಯಿರಲಿ

Sunday, January 23, 2011

ಭಾರತದಲ್ಲಿ ಭಾರತವೇ ತಬ್ಬಲಿ??!! ಭಾಗ ೩



                                           
      ಜಮ್ಮು-ಕಾಶ್ಮೀರದಲ್ಲಿ  66.97% ಮುಸ್ಲಿಮರಿದ್ದು, ಅವರಲ್ಲಿ ಹೆಚ್ಚಿನವರು ಬಡಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, .ಅವರನ್ನು ಚಿಕ್ಕಂದಿನಿಂದಲೇ ಮದಿರಸಾಗಳಲ್ಲಿ ಓದಿಸಲಾಗುತ್ತದೆ. ಅಲ್ಲಿರುವ ಮತಾಂಧ ಮುಲ್ಲಾಗಳು ಕುರಾನ್ ಜೊತೆಯಲ್ಲೆ ಮತಾಂಧತೆಯ ವಿಷಬೀಜ ಬಿತ್ತುತ್ತಾರೆ. ಅದು ಬಲಿತು ನೀಡುವ ಫಲವೇ  ಜೇಹಾದ್!!!!!
     ಇತ್ತೀಚಿನ  ದಿನಗಳಲ್ಲಿ  ಪ್ರಪಂಚವನ್ನೇ ಬೆಚ್ಚಿಬೀಳಿಸಿದ  ಪದ ಜೇಹಾದ್,  ಇದು ಸುಮ್ಮನೆ ಉದ್ಬವವಾದುದಲ್ಲ.  ಇದರ ಹಿಂದೆ  ಅಪಾರವಾದ  ಶ್ರಮ,ದೂರಗಾಮಿ ದುರಾಲೋಚನೆಗಳಿವೆ. ಇದನ್ನು ಮತಾಂಧ ಮುಲ್ಲಾಗಳು,ಮುಸ್ಲಿಮ್ ನಾಯಕರುಗಳು ತಮ್ಮ ಅವಶ್ಯಕಥೆಗೆ ತಕ್ಕಂತೆ ಬಳಸಿಕೊಳ್ಳುತ್ತಾರೆ.ಇದಕ್ಕೆ ಉತ್ತಮ ನಿಧರ್ಶನ  ಮುಶ್ರಫ್,ಪಾಕಿಸ್ತಾನದಲ್ಲಿ  ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರ ಹಿಡಿದ  ಮುಶ್ರಫ್, ಸ್ತಳೀಯರಿಂದ ವಿರೋಧ ವ್ಯಕ್ತವಾದಾಗ ಅವರ ಗಮನವನ್ನು  ಬೇರೆಕಡೆ ಸೆಳೆಯಲು ಬಳಸಿಕೊಂಡ ಉಪಾಯವೇ ಜೇಹಾದ್!!!!!

     ಜಮ್ಮು-ಕಾಶ್ಮೀರ ಒಂದರಲ್ಲೆ  ಸುಮಾರು  ೭೦೦೦ಕ್ಕೂ ಹೆಚ್ಚು ಮದಿರಸಗಳಿವೆ  ಅದರಲ್ಲಿ  ಸುಮಾರು ೬ ಸಾವಿರ ಮದಿರಸಗಳು ಜೇಹಾಧಿಗಳನ್ನು  ಉತ್ಪಾಧಿಸುತ್ತವೆ.ಮದಿರಸಗಳಲ್ಲಿ ಕಲಿತ ಎಲ್ಲರು ಜೇಹಾಧಿಗಳಾಗುವಿದಿಲ್ಲ ,ಅವರುಗಳನ್ನು ಕಠಿಣವಾಗಿ ಪರಿಕ್ಷಿಸಲಾಗುತ್ತದೆ.ಅವರಲ್ಲಿರುವ ಕೆಚ್ಚು,ಮತಾಂಧತೆಯ ಪ್ರಮಾಣ,ಧೈರ್ಯ-ಸಾಹಸಗಳನ್ನಾದರಿಸಿ ಆಯ್ಕೆಪ್ರಕ್ರಿಯೆ ನಡೆಯುತ್ತದೆ.ಹೀಗೆ ಆಯ್ಕೆಗೊಂಡ  ಅರೆ-ಜೇಹಾಧಿಗಳನ್ನು ಅಫ್ಗಾನಿಸ್ತಾನದ ಯಾ ಪಾಕಿಸ್ತಾನದ  ಗಡಿರೇಖೆಗಳಲ್ಲಿರುವ  ತರಬೇತಿ ಶಿಬಿರಗಳಿಗೆ ಕಳುಹಿಸಲಾಗುತ್ತದೆ. ಈ ಶಿಬಿರಗಳಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ತೆ ಐ.ಎಸ್.ಐ ಯು ಕುಧ್ಧಾಗಿ ಮಿಲಿಟರಿ ಶಿಕ್ಷಣ,ಶಸ್ತ್ರಾಭ್ಯಾಸ,ಗೆರಿಲ್ಲಾ ಸಮರಕಲೆಯನ್ನು ಕಲಿಸುತ್ತದೆ. 

 

ಹೀಗೆ ತರಬೇತುಗೊಂಡ  ಯವಕರೇ ಸಂಪೂರ್ಣ ಜೇಹಾಧಿಗಳಾಗಿ ರೂಪುಗೊಂಡು, ಜೆ.ಕೆ.ಎಲ್.ಎಫ  ನಂತಹ ಉಗ್ರಗಾಮಿ ಸಂಘಟನೆ ಸೇರಿ ರಕ್ತಬೀಜಾಸುರರಾಗುತ್ತಾರೆ.೨೦೦೮ ರ ವೇಳೆ ಇಂತಹ  ೨ಸಾವಿರ ಶಿಬಿರಗಳು ಸಕ್ರೀಯವಾಗಿ  ಕರ್ಯನಿರ್ವಹಿಸುತ್ತಿದೆಯಂದು ಸಿ.ಅಯ್.ಏ ತನ್ನವರಧಿಯಲ್ಲಿ ವ್ಯಾಖ್ಯಾನಿಸಿದೆ.
     ಈ ಮೇಲೆ ತಿಳಿಸಿದಂತೆ ಮದಿರಸಾಗಳಲ್ಲಿ ಮತಾಂಧ ಮುಲ್ಲಾಗಳು ಕುರಾನ್ ಜೊತೆಯಲ್ಲೆ ಮತಾಂಧತೆಯ ವಿಷಬೀಜ ಬಿತ್ತುತ್ತಾರೆ ಅದರ ಸಂಕ್ಷಿಪ್ತ ರೂಪ ಹೀಗಿದೆ

೧) ಮುಸ್ಲಿಮ್ ಧರ್ಮವೊಂದೇ  ಶ್ರೇಷ್ಟ ಉಳಿದೆಲ್ಲಾ ಧರ್ಮಗಳು ಕನಿಷ್ಟ  
೨)ಪ್ರಪಂಚವನ್ನು ಮುಸ್ಲಿಮ್ ಧರ್ಮದ ಆಳ್ವಿಕೆಗೆ ತರಲು ಪ್ರತಿಯೊಬ್ಬ  ಮುಸ್ಲಿಮನೂ ತ್ಯಾಗ-ಬಲಿಧಾನ ಮಾಡಬೇಕು
೩)ಕಾಫಿರರು(ಮೂರ್ತಿ ಪೂಜಕರು ಯಾ ಮುಸ್ಲಿಮೇತರು) ಇಸ್ಲಾಂ ವಿರೋಧಿಗಳು
೪)ಇಸ್ಲಾಂ ಉದ್ದಾರಕ್ಕಾಗಿ ಜೇಹಾದ್(ಧರ್ಮಯುಧ್ಧ) ಮಾಡೂವವನು ಅಲ್ಹಾಹುವಿನ ವಿಶೇಷ ಕ್ರಪೆಗೆ ಪಾತ್ರನಾಗುತ್ತಾನೆ
೫)ಹಿಂದುಸ್ತಾನ್ ಕಾಪಿರ ಧೇಶ ಅಲ್ಲಿರುವ ಮುಸ್ಲಿಮರನ್ನು ಅರ್ಧರಾತ್ರಿಯಲ್ಲಿ ಹೊಡೆದು ಓಡಿಸಲಾಯಿತು
೬)ಕಾಪಿರ ಧೇಶದ ವಿರುಧ್ಧ  ಜೇಹಾದ್ ಮಡುವುದು ಮುಸ್ಲಿಮರ ಕರ್ತವ್ಯ
೭)ಜೇಹಾದ್ನಲ್ಲಿ ಶಾಹೀಧ್(ವೀರಮರಣ) ಆದವನು ಜನ್ನತ್ತ್ ಸೇರುತ್ತಾನೆ(ವೀರಸ್ವರ್ಗ)
(ಇದು ಒಂದು ಚಿಕ್ಕ ತುಣುಕಷ್ಟೆ,ಇನ್ನು ಕಠೋರ ಭಾಷೆಯನ್ನು ಬಳಸಲಾಗಿತ್ತಿದೆ. ಸಾಮರಸ್ಯದ ಭಾವನೆಯಿಂದ  ಪ್ರಕಟನೆಗೊಳಿಸಲಾಗಿಲ್ಲ.-ಲೇಖಕ)
ಹೀಗೆ ಮದಿರಸಗಳಲ್ಲಿ  ಮತಾಂಧ ಬೋಧನೆಯನ್ನು ಪ್ರತಿನಿತ್ಯ ಮಾಡಿ ಬಾಲಕರ ಮನವನ್ನು      
ಕೆಡಿಸಲಾಗುತ್ತಿದೆ.ಮನಕೆಡಿಸಿಕೊಂಡ ಬಾಲಕರನ್ನು  ಜೇಹಾಧಿಗಳಾಗಿ ಪರಿವರ್ತಿಸುವಲ್ಲಿ  ಮದಿರಸಗಳ ಪಾತ್ರ ಪ್ರಮುಖವಾಗಿದ್ದು ಬಡ ಬಲಕರನ್ನು ಉಚಿತ ಊಟ,ವಸತಿ ಹಣಸಹಾಯ,ಮುಂತಾದ ಆಮಿಶಗಳಮೂಲಕ ಮದಿರಸಗಳಿಗೆ ಸೆಳೆಯಲಾಗುತ್ತದೆ. ಇತ್ತೀಚೆಗೆ ಸಮಿಕ್ಷೆ ನಡೆಸಿದ ಎಜಿಓ ಪ್ರಕಾರ  ಜಮ್ಮು-ಕಾಶ್ಮೀರದಲ್ಲಿ ಇಂತಹ  ಸುಮಾರು  ೬ಸಾವಿರ ಮರಿಸೇನಾಪಡೆ  ವಿವಿಧ ಸಂಘಟನೆಗಳಲ್ಲಿ  ಸಕ್ರೀಯವಾಗಿದ್ದು,  ಇವರುಗಳನ್ನು  ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಗೆ,ಗಲಬೆ-ದುಂಭಿಗಳಿಗೆ ಬಳಸಿಕೊಳ್ಳಲ್ಲಾಗುತ್ತಿದೆ.

ಉಪಸಂಹಾರ
ಭಾರತದಲ್ಲಿ  ಭಾರತವೇ ತಬ್ಬಲಿಯಾಗಲು  ಕೇವಲ  ಉಗ್ರವಾಧ,ಜಮ್ಮು-ಕಾಶ್ಮೀರ, ಒಂದೇ ಕಾರಣವಲ್ಲ,ಆದರೆ ಅರುಂಧತಿ ರಾಯ್ ಯಂತಹ ಖ್ಯಾತ ಲೇಖಕಿ ಜಮ್ಮು-ಕಾಶ್ಮೀರದ ಕುರಿತು  ಧೇಶದ್ರೋಹದ ಹೇಳಿಕೆಯನ್ನು ನೀಡಿದಾಗ ಶಂಡನಂತೆ ಸುಮ್ಮನೆ ಕುಳಿತ ಕೇಂದ್ರಸರ್ಕಾರದ ವೈಕರಿಯನ್ನು ನೋಡಿ ರೋಸಿ ಜಮ್ಮು-ಕಾಶ್ಮೀರ ಸಮಸ್ಯೆಯ ಸತ್ಯಾನುಸತ್ಯತೆಯನ್ನು  ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
 
ಭಾರತದಲ್ಲಿ  ಭಾರತವೇ ತಬ್ಬಲಿಯಾಗಿಸುವಲ್ಲಿ  ರಾಜಕೀಯ ಪಕ್ಷಗಳು,ರಾಜಕಾರಣಿಗಳು, ವಿಧೇಶಿ ಕಂಪನಿಗಳು,ಉಗ್ರವಾಧಿ ಸಂಘಟನೆಗಳು, ಅರುಂಧತಿ ರಾಯ್ ಯಂತಹ ಬುದ್ದಿಜೀವಿಗಲು, ಪತ್ರಿಕೆ, ಶಾಲಾ-ಕಾಲೇಜುಗಳು ಸೇರಿವೆ, ಪರಿಸ್ತಿತಿ ಹೀಗೆ ನಡೆದಲ್ಲಿ, ಮುಂದೊಂದು ದಿನ ಸಂಪೂರ್ಣ ಭಾರತವೇ ತಬ್ಬಲಿಯಾಗಿಹೋಗುವುದರಲ್ಲಿ ಅನುಮಾನವಿಲ್ಲ .   ಇದನ್ನೆಲ್ಲ  ಓದಿಮುಗಿಸಿದಾಗ  ಮೊಳಗುತ್ತಿದೆ  ಜರ್ಮನ್ ಕವಿ ಎರಿಕ್ ಫ್ರೈಡನ ಎಚ್ಹರಿಕೆ ಗಂಟೆ
                                                      ಹಿಂದೆ ಸಂಬವಿಸಿತ್ತು,
                                                      ಈಗಲೂ ಘಟಿಸುತ್ತಿದೆ
                                                      ಮುಂದೆಯೂ ತಿರುತಿರುಗಿ ನಡೆಯಲೂಬಹುದು-
                                                      ತಡೆಯುವಂತಹುದೇನು
                                                      ನಡೆಯದಿದ್ದಲ್ಲಿ.  

Sunday, January 16, 2011

ಭಾರತದಲ್ಲಿ ಭಾರತವೇ ತಬ್ಬಲಿ??!! ಭಾಗ ೨

                    ಭಾರತದಲ್ಲಿ ಭಾರತವೇ ತಬ್ಬಲಿ  ಮುಂದುವರಿದ ಬಾಗ   


                         ಹಿಂದೆ ಸಂಬವಿಸಿತ್ತು,
                          ಈಗಲೂ ಘಟಿಸುತ್ತಿದೆ
                          ಮುಂದೆಯೂ ತಿರುತಿರುಗಿ ನಡೆಯಲೂಬಹುದು-
                          ತಡೆಯುವಂತಹುದೇನು
                          ನಡೆಯದಿದ್ದಲ್ಲಿ. 
                          ಮುಗ್ದರಿಗೆ ಗೊತ್ತಿಲ್ಲ,
                          ಅತಿ ಮುಗ್ದರು
                          ಬಡವರಿಗೆ ಗಮನಿಸಲು ಸಮಯವಿಲ್ಲ
                          ಧನಿಕರಂತು ಬಿಡಿ, ಬಹಳ ಶ್ರೀಮಂತರು
                          ದಡ್ಡರಿಗಿದೊಂದು ಅರ್ಥವೇ ಆಗದು
                          ಕುಶಲಿಗಳು ಭುಜ ಕುಣಿಸಿ
                          ನಡೆದು ಬಿಡುವರು ನೋಡಿ
                          ಅವರಿಗಿದು ಕ್ಷುಲ್ಲಕ ವಿಶಯ.
                          ಕಿರಿಯರಿಗೆ,ಹಿರಿಯರಿಗೆ
                          ಇದರ ಪರಿವೆಯೇ ಎಲ್ಲ
                          ತಡೆಯುವಂಥದು ಏನು ನಡೆಯುವುದಿಲ್ಲ.
                          ಆದ್ದರಿಂದಲೇ ನೋಡಿ-   ಹಿಂದೆ ಸಂಬವಿಸಿತ್ತು      
                          ಈಗಲೂ ಘಟಿಸುತ್ತಿದೆ 
                          ಮುಂದೆಯೂ ತಿರುತಿರುಗಿ ನಡೆಯಲೂಬಹುದು
                                                  --ಎರಿಕ್ ಫ್ರೈಡ್  (ಕ್ರಪೆ: ಪ್ರಕ್ಷುಬ್ದ ಕಾಶ್ಮೀರ)
      
 
  ೧೯೪೭ ಅಕ್ಟೋಬರ್ ೨೦ರಂದು ಪಾಕಿಸ್ತಾನಿ ಸೈನಿಕರು ಕಾಶ್ಮೀರದಮೇಲೆ ದಾಳಿಮಾಡಿದಾಗ, ಜೀವಬಯದಿಂದ ರಾಜಾ ಹರಿ ಸಿಂಗ್ ಭಾರತದೋಂದಿಗೆ ಮೀಲೀನವಾಗುವ ಆಶಯ ವೆಕ್ತಪಡಿಸಿ( ಅಕ್ಟೋಬರ್೨೪) ಅಕ್ಟೋಬರ್ ೨೬ರಂದು ಮೀಲೀನಪತ್ರವನ್ನು ಅಂದಿನ ಪ್ರಧಾನಿ ನೆಹರುರವರಿಗೆ ರವಾನಿಸಿದರು .ಆ ಪತ್ರದಲ್ಲಿ ಕಾಶ್ಮೀರಕ್ಕೆ ಕೆಲವು          ವಿಶೇಶಸ್ತಾನಮಾನಗಳನ್ನು ಕೇಳಲಾಗಿತ್ತು.ಅದರಲ್ಲಿಮುಖ್ಯವಾದುದ್ದು  ಪ್ರತ್ಯೇಕ ಸಂವಿಧಾನ, ೩೭೦ ವಿಧಿ. ಮೂಲತಹ ಕಾಶ್ಮೀರಿಯಗಿದ್ದ ನೆಹರು ಇದಾವುದರ ಪೂರ್ವಾಪರ ಯೋಚಿಸದೆ ಅಂಕಿತವನ್ನೋತ್ತಿದರು. ಈಬಗ್ಗೆ  ಅಂದಿನ ಗ್ರಹಮಂತ್ರಿಯಗಿದ್ದ ಸರ್ದಾರ್ ವಲ್ಲಬಾಯ್ ಪಟೇಲರು ವೀರೋಧಿಸಿದರು ಸಹ ಅವರ ಬಾಯಿಮುಚ್ಚಿಸಲಾಯಿತು. ಕಾಶ್ಮೀರವು ಭಾರತದೊಡನೆ ಮಿಲೀನವಾದಾಗ ಅಲ್ಲಿ ಪ್ರತ್ಯೇಕ ಸಂವಿಧಾನ ಪ್ರಶ್ನೇಯೇ ಉಧ್ಬವಿಸಿವುದಿಲ್ಲವೆನ್ನುವ ಕನಿಷ್ಟಯೋಚನೆಯನ್ನು ಮಾಡದ ನೆಹರು,ತಾವು ತೆಗೆದುಕೊಂಡ ದುಡುಕಿನ ನಿರ್ಧಾರದಿಂದಗಿ ಕಾಶ್ಮೀರ್ ಸಮಸ್ಯೆಯನ್ನು ಇನ್ನು ಜಿವಂತವಾಗಿಟ್ಟರು.
ಹಾಗೆ ನೋಡಿದರೆ ಇದು ನೆಹರುರವರ  ಪ್ರಥಮ ತಪ್ಪಲ್ಲ!!! ಭಾರತದ ಸ್ವಾತಂತ್ಯ ಸಂಧರ್ಬದಲ್ಲಿ   ನೆಹರು ಮತ್ತು ಲಾರ್ಡ್ ಮೌಂಟ್ ಭ್ಯಾಟನ್ನರ್ ಪತ್ನಿ ಎಡ್ವಿನಾರ ಸಂಬಧದಿಂದಾಗಿ  ಭಾರತವಿಭಜನೆಯಂತಹ  ಮಾಸದ ಗಾಯ ಧೇಶಕ್ಕಾಗಿ ಹೋಗಿತ್ತು. ಈ ಬಗ್ಗೆ  ದಿ ಗ್ರೇಟ್ ನೆಹರು ಬ್ಲಂಡರ್ಸ್!! ನಲ್ಲಿ  ವಿವರವಾಗಿ ಬರೆಯುತ್ತೇನೆ.                   
  ಕಾಶ್ಮೀರದ ಸಮಸ್ಯೆಯನ್ನು ನಾವು ಅರಿಯಬೇಕಾದರೆ ನಾವು ಅದರ ಬೌಗೋಳಿಕಥೆಯನ್ನು  ಅರ್ಥಮಾಡಿಕೋಳ್ಳಬೇಕು    ಕಾಶ್ಮೀರವು  ಭಾರತದ ಮುಕುಟ ಸ್ತಾನದಲ್ಲಿದ್ದು  ತುಂಬಾ ವಿಶಿಷ್ಟವಾದ  ಬೌಗೋಳಿಕಥೆಯನ್ನು  ಹೊಂದಿದೆ. ಸುಂಧರ ಕಣಿವೆಗಳು ,ಹಿಮೋಚ್ಚಾಧಿತ ಪರ್ವತಗ್ಅಳು, ಲಡಾಖ್ ನಂತಹ ಮರುಭೂಮಿಗಳನ್ನು ಹೊಂದಿರುವ ಜಮ್ಮು-ಕಾಶ್ಮೀರ್  ಪಾಕಿಸ್ತಾನ,ಚೈನಾ,ಹಾಗು ಅಫ್ಗಾನಿಸ್ತಾನಗಳ ಗಡಿನಿಯಂತ್ರಣ ರೇಖೆ
 ಹೊಂದಿರುವ ಜಮ್ಮು-ಕಾಶ್ಮೀರ್  ರಕ್ಷಣಾವ್ಯವಸ್ತೆಯಲ್ಲಿ  ಅತಿಪ್ರಮುಖ ಪ್ರಧೇಶವಾಗಿದೆ.                                           
ಸುಮಾರು ೧೦ಕೋಟಿ ಜನಸಂಖ್ಯೆ ಹೊಂದಿರುವ ಜಮ್ಮು-ಕಾಶ್ಮೀರದಲ್ಲಿ  66.97% ಮುಸ್ಲಿಮರಿದ್ದಾರೆ. ಉಳಿದ ೩೩.೦೩%ರಲ್ಲಿ ಹಿಂದುಗಳು, ಸಿಖ್ಖರು,ಬೌಧರು ವಾಸಿಸುತ್ತಿದ್ದಾರೆ.ಈ ಕಾರಣಕ್ಕಾಗಿಯೇ ಪಾಕಿಸ್ತಾನ ಕಾಶ್ಮೀರದ ಮೇಲೆ ಯುಧ್ಧಸಾರಿ ಸೋತು ಮುಖಬಂಗ ಅನುಬವಿಸಿದೆ.ಅದರೂ ಸಹ ತೆರೆಮರೆಯಲ್ಲಿ ಗಡಿಯಾಚೆಯ ಭಯೋತ್ಪಾಧನೆಯನ್ನು ಮುಂದುವರಿಸಿದೆ.
  ಈ ಹಿಂದೆ ತಿಳಿಸಿದಂತೆ ಜಮ್ಮು-ಕಾಶ್ಮೀರದಲ್ಲಿ  66.97% ಮುಸ್ಲಿಮರಿದ್ದು, ಅವರಲ್ಲಿ ಹೆಚ್ಚಿನವರು ಬಡಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, .ಅವರನ್ನು ಚಿಕ್ಕಂದಿನಿಂದಲೇ ಮದಿರಸಾಗಳಲ್ಲಿ ಓದಿಸಲಾಗುತ್ತದೆ.                                                                     
ಅಲ್ಲಿರುವ ಮತಾಂಧ ಮುಲ್ಲಾಗಳು ಕುರಾನ್ ಜೊತೆಯಲ್ಲೆ ಮತಾಂಧತೆಯ ವಿಷಬೀಜ ಬಿತ್ತುತ್ತಾರೆ. ಅದು ಬಲಿತು ನೀಡುವ ಫಲವೇ  ಜೇಹಾದ್!!!!!

ಮುಂದಿನ ಭಾಗ  ಮುಂದಿನ ವಾರ

ಉತ್ತಮ ಪ್ರತಿಕ್ರೀಯೆಗಳಿವೆ  ದಯವಿಟ್ಟು ನೋಡಿ

Sunday, January 9, 2011

ಭಾರತದಲ್ಲಿ ಭಾರತವೇ ತಬ್ಬಲಿ??!!

ಕಾಶ್ಮೀರದಲ್ಲಿ  ತ್ರಿವರ್ಣಧ್ವಜ ಹಾರಿಸಿದರೆ ಆಗುವ ದುಶ್ಪರಿಣಾಮಕ್ಕೆ ಬಿಜೆಪಿಯೇ ಹೊಣೆ --ಫರೂಖ್ ಅಬ್ದುಲ್ಲ  ಈ ಹೇಳಿಕೆ ನೀಡಿದ್ದು ಕಾಶ್ಮೀರದ ಆಡಳಿತಾರೂಡ ಪಕ್ಷದ ಸಂಸ್ತಾಪಕ,ಮಾಜಿ ಮುಖ್ಯಮಂತ್ರಿ,ಹಾಲಿ ಮುಖ್ಯಮಂತ್ರಿ ತಂದೆ ಫರೂಖ್ ಅಬ್ದುಲ್ಲ!!!!
ಹಾಗಿದ್ದರೆ  ಭಾರತದಲ್ಲಿ ಇನ್ನ್ಯಾವ  ಧ್ವಜ ಹಾರಿಸಬೇಕು? ಪಾಕಿಸ್ತಾನದ್ದೆ? ಚೈನಾದ್ದೆ? ಯಾ  ಪ್ರಪಂಚದ ಹಿರಿಯಣ್ಣ  ಅಮೇರಿಕದ್ದೆ?!!

ಈ ಹೇಳಿಕೆಯನ್ನು ಶ್ರಿಸಾಮಾನ್ಯನೊಬ್ಬ ನೀಡಿದ್ದರೆ, ದೇಶದ್ರೋಹದ ಆಪಾಧನೆಮೇರೆಗೆ ಜೈಲಿಗೆ ಕಳುಹಿಸುತ್ತಿದ್ದರು! ಆದರೆ ಈಃಹೀಳಿಕೆ ನೀಡಿದ್ದು ಕಾಶ್ಮೀರ ಆಡಳಿತ ಪಕ್ಷದ ಅಧ್ಯಕ್ಷ !
ಭಾರತೀಯ  ರಾಜ್ಯಸರ್ಕಾರವೊಂದು  ಇಂತಹ ದೇಶದ್ರೋಹದ ಹೇಳಿಕೆ ನೀಡಿರುವಾಗ ಕೇಂದ್ರಸರ್ಕಾರ ಜಾಣಕಿವುಡು ತೋರಿಸುತ್ತಿದೆ!
ನಾನಿಲ್ಲಿ ಯಾವುದೆ ಪಕ್ಷವನ್ನು  ಹೊಗಳುವುದಾಗಲಿ ಯಾ ತೆಗಳುವುದಾಗಲಿ ಮಾಡುತ್ತಿಲ್ಲ, ಎಲ್ಲಾ ಪಕ್ಷಗಳನ್ನು ಒಂದೆ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದೆನೆ.ಏಕೆಂದರೆ ಇಲ್ಲಿ ಯಾವುದೆ ಪಕ್ಷಗಳು  ಧೇಶಾಭಿಮಾನವನ್ನಿಟ್ಟು ಜಾತಾ, ಹೇಳಿಕೆಯನ್ನು ನೀಡುತ್ತಿಲ್ಲ, ಕೇವಲ  ಸ್ವಪ್ರತಿಷ್ಟೆಗಾಗಿ ಪರಸ್ಪರ ಕೆಸರೆಚಾಟದಲ್ಲಿ ನಿರತವಾಗಿವೆ.           
ಕಾಶ್ಮೀರದಲ್ಲಿರುವ ಪಂಡಿತ್ ಸಮುದಾಯವನ್ನು ಓಲೈಸಿ ತನ್ಮೂಲಕ ತನ್ನ ನೆಲೆ ಸ್ತಾಪಿಸುವ ದೂರಾಲೋಚನೆಯಿಂದ ಬಿಜೆಪಿ ತ್ರಿವರ್ಣಧ್ವಜ ದಂತಹ ಅಜೆಂಡ ಕೈಗೆತ್ತಿಕೊಂಡರೆ,ಮುಸ್ಮಿಮರ ಓಲೈಕೆಗಾಗಿ  ಫರೂಖ್ ಇತಂಹ ಹೇಳಿಕೆ ನೀಡುತ್ತಿದ್ದಾರೆ.
ಫರೂಖ್ ಟೀಕಿಸುತ್ತಿರುವುದು ವಿರೋಧ ಪಕ್ಷವಾದ ಬಿಜೆಪಿಯನ್ನುವ ಕಾರಣಕ್ಕಾಗಿ  ಕಾಂಗ್ರೆಸ್ ಜಾಣಮೌನವಹಿಸಿದೆ
ಸ್ವಾತಂತ್ರೋತ್ಸವದಂದು ಹುಬ್ಬಳ್ಳಿ, ಭಟ್ಕಳ, ಗುಲಬರ್ಗದಂತಹ ಕೆಲವು ಜಿಲ್ಲೆಗಳಲ್ಲಿ  ಪಾಕಿಸ್ತಾನಿ ಧ್ವಜಗಳು ಹಾರಾಡುತ್ತಿರುವುದು ಇಂದು ರಹಸ್ಯವಾಗೆನು ಉಳಿದಿಲ್ಲವಾದರು ಧೇಶಧ್ವಜ ವಿಚಾರ ಬಂದಾಗ ಕೆಲವು ಸಂಘಟನೆಗಳು ಅಡ್ಡಿಪದಿಸುತ್ತಿದೆ.ಇದಕ್ಕೆ  ರಾಜಕೀಯ ಪಕ್ಷದ  ಬೆಂಬಲವಿರುತ್ತದೆ. ಇಂತಹ ಹೇಸಿರಾಜಕೀಯ ಪಕ್ಷಗಳಿಂದ  ಧೇಶೋಧ್ಧಾರವಾಗಲು ಸಾದ್ಯವಿದೆಯೆ?     ಇಂತಹದಕ್ಕೆ ಆಡಳಿತ ಪಕ್ಷಗಳು ಕುಮ್ಮಕ್ಕು ನೀದ್ಡುವುದಾದರೆ ಮುಂದೊಂದು
ದಿನ ಧೇಶದಲ್ಲಿ ಸ್ವಾಭಿಮಾನ ಧೇಶಭಕ್ತಿಯನ್ನುವ ಪದಗಳು ಅರ್ಥಕಳೆದುಕೊಂಡು ಇನ್ನೊಂದು ಬ್ರಿಟೀಶ್ ದಾಳಿಗೆ ಹಾದಿಯಾದಿತು. ಏದ್ದೇಳಿ  ಭಾರತಿಯರೆ  ಏದ್ದೇಳಿ,  ಭಾರತದ ಸಾರ್ವಭೌಮತೆಯನ್ನು ಪುನರುಜ್ಜೀವನಗೋಳಿಸಿ!!!!

 ಕಾಶ್ಮೀರದ ವಿಚಾರಕ್ಕೆ ಬರುವುದಾದರೆ ಈ ಸಮಸ್ಯೆ ಇಂದು ನಿನ್ನೆಯದಲ್ಲ, ಅಕ್ಟೋಬರ್ ೨೬  ೧೯೪೭ರಂದು ಜಮ್ಮು-ಕಾಶ್ಮೀರ್ ಭಾರತದಲ್ಲಿ ಮೀಲೀನವಾದಾಗಿಂದಲು ಈ ಸಮಸ್ಯೆ ಕಾಡುತ್ತಿದೆ
ಭಾರತ ಸ್ವಾತಂತ್ರ್ಯ ಸಂಧರ್ಬದಲ್ಲಿ  ಕಾಶ್ಮೀರಕ್ಕೆ ಕೇವಲ ಮೂರು ಆಯ್ಕೆಗಳಿದ್ದವು, ಭಾರತದೊಂದಿಗೆ ಯಾ ಪಕಿಸ್ತಾನದೊಂದಿಗೆ ಮೀಲೀನಗೊಳ್ಳುವುದು ಅಥವಾ  ಸ್ವಾತಂತ್ರವಾಗಿರುವುದು, ಅಂದಿನ ಕಾಶ್ಮೀರದ ಮಹರಾಜ ರಾಜಾ ಹರಿ ಸಿಂಗ್ ಸ್ವಾತಂತ್ರವಾಗಿರಲು ಬಯಸಿದರು,  ಇದಕ್ಕೆ  ಒಪ್ಪಿಕೊಂಡ ಮೌಂಟ್ ಬ್ಯಾಟನ್ ಅಗಸ್ಟ್ ೧೫ರಂದು
 ಸ್ವಾತಂತ್ಯವನ್ನು ಘೋಷಿಸಿದರು.

ಆದರೆ ೧೯೪೭ ಅಕ್ಟೋಬರ್ ೨೦ರಂದು ಪಾಕಿಸ್ತಾನಿ ಸೈನಿಕರು ಕಾಶ್ಮೀರದಮೇಲೆ ದಾಳಿಮಾಡಿದಾಗ, ಜೀವಬಯದಿಂದ ರಾಜಾ ಹರಿ ಸಿಂಗ್
ಭಾರತದೋಂದಿಗೆ ಮೀಲೀನವಾಗುವ ಆಶಯ ವೆಕ್ತಪಡಿಸಿ( ಅಕ್ಟೋಬರ್೨೪) ಅಕ್ಟೋಬರ್ ೨೬ರಂದು ಮೀಲೀನಪತ್ರವನ್ನು ಅಂದಿನ ಪ್ರಧಾನಿ ನೆಹರುರವರಿಗೆ ರವಾನಿಸಿದರು .ಆ ಪತ್ರದಲ್ಲಿ ಕಾಶ್ಮೀರಕ್ಕೆ ಕೆಲವು
ವಿಶೇಶಸ್ತಾನಮಾನಗಳನ್ನು ಕೇಳಲಾಗಿತ್ತು  ಅವಾಗ ನಡೆದ ಮೊದಲ ತಪ್ಪೇ  "ದಿ ಗ್ರೇಟ್ ನೆಹರು ಬ್ಲಂಡರ್ಸ್!!!!!!!!!!
                                

                                                                                                                                                                          ಮುಂದಿನ ಭಾಗ  ಮುಂದಿನ ವಾರ
ನಿರಿಕ್ಷಿಸಿ   "ದಿ ಗ್ರೇಟ್ ನೆಹರು ಬ್ಲಂಡರ್ಸ್!!

Sunday, January 2, 2011

ಶತಮಾನದ ಹೊಸ ಶಬ್ದ "ಹಿಂದು ಉಗ್ರಗಾಮಿ"




  ಪಿಟಿಐ.ಡಿ 20. ಹಿಂದು ಉಗ್ರಗಾಮಿ ಗಳಿಂದ  ಅಲ್ಪಸಂಕ್ಯಾತರ ಮೇಲೆ ಹಲ್ಲೆ  1 ಸಾವು............!!??? ಮುಂತಾದ ತಲೆಬರಹವುಳ್ಳ  ಸುದ್ದಿಗಳಿಂದು ಮಾದ್ಯಮಗಳಲ್ಲಿ  ಸರ್ವೆಸಾಮಾನ್ಯವಾಗಿ ಕಾಣಸಿಗುತ್ತಿವೆ ಈ ಬಗ್ಗೆ ಯಾರು ತಲೆಕೆಡಿಸಿಕೊಂಡಂತ್ತಿಲ್ಲ.!
  ಯಾರಿವರು?  ಯಲ್ಲಿಂದ ಉಧ್ಬವಿಸಿದರು?......... ಉಹೂಂ  ಗೊತ್ತಿಲ್ಲ,  ಈ ಶಬ್ದವನ್ನು ಉಪಯೋಗಿಸಿದ  ಮಾಧ್ಯಮದವರಿಗೆ ಗೊತ್ತಿಲ್ಲ!!!.  ರಾಮಮಂದಿರ ಗಲಾಟೆಯಿಂದ ಪ್ರಾರಂಬವಾಯಿತೆಂದು ಕೆಲವರು ಊಹಿಸಿದರೆ,

ಗುಜುರಾತ್ ಗಲಭೆಯಿಂದ ಪ್ರಾರಂಬವಾಯಿತೆಂದು ಕೆಲವರ ಅಂಬೋಣ.ಈ ಸಂಘಟನೆ ಯಾವುದು? ಯಾವ ಧೇಶಧ್ರೋಹ ಕಾರ್ಯದಲ್ಲಿ ನಿರತವಾಗಿದೆ?ಎಲ್ಲೆಲ್ಲಿ ಬಾಂಬ್ ಸಿಡಿಸಿದ್ದಾರೆ? ಯಾವ ವಿಮಾನ ಅಪಹರಿಸಿದ್ದಾರೆ?  ಯಾವುದಕ್ಕು ಮಾಹಿತಿಯಿಲ್ಲ.ಆದರು  ಈ ಶಬ್ದ  ಇಂದು ಸರ್ವೇಸಾಮಾನ್ಯ. ಈ ಶಬ್ದದ ಮೂಲವನ್ನು ಕೆದಕುತ್ತ ಹೋದರೆ ಬಿಚ್ಚಿಕೊಳ್ಳುವುದು ಭಾರತದ ರಾಜಕೀಯ ಪಕ್ಷಗಳ ಕರಾಳ ಇತಿಹಾಸ. ಅಧಿಕಾರದ ಲಾಲಸೆಗೆ ಬಿದ್ದ ರಾಜಕೀಯ ಪಕ್ಷಗಳು ವೋಟಿಗಾಗಿ ನಡೆಸಿದ ಶಡ್ಯಂತರದ ಫಲವೆ     "ಹಿಂದು ಉಗ್ರಗಾಮಿ". ಈ ಕೊಡಿಗೆಯನ್ನ ನೀಡಿದ್ದು  ಆಡಳಿತಾರೂಡ  ಕಾಂಗ್ರೇಸ್ ಪಕ್ಷ!!!
     ಸ್ವಾತಂತ್ರ್ಯಾಪೂರ್ವದಿಂದಲೂ ಅಲ್ಪಸಂಕ್ಯಾತರ ಮೇಲೆ ಒಲವು ಬೆಳೆಸಿಕೊಂಡ  ಕಾಂಗ್ರೇಸ್ ಪಕ್ಷ ಅಖಂಡ ಭಾರತದ ವಿಭಜನೆಗೆ ಕಾರಿಣೀಭೂತವಾಗಿರುವುದು ಈಗ ಇತಿಹಾಸವಾದರು, ಇದು ಇಂದಿಗೂ ಜ್ವಲಂತ ಸಮಸ್ಯೆಯಾಗೆ ಉಳಿದಿದೆ.ಸ್ವಾತಂತ್ರ್ಯಾನಂತರ ಆಡಳಿತಕ್ಕೆ ಬಂದ ಕಾಗ್ರೇಸ್  ವೋಟ್ ಬ್ಯಾಂಕ್ ರಾಜಕೀಯಕ್ಕಿಳಿಯಿತು.

ಮುಸ್ಲಿಮ್ ಯಾ ಕ್ರೈಸ್ತರಲ್ಲಿರುವ ಜನಾಂಗೀಯ ಒಗ್ಗಟ್ಟು  ಹಿಂದುಗಳಲ್ಲಿಲ್ಲದನ್ನು ಅರಿತ ಪಕ್ಷ ವೋಟಿಗಾಗಿ ಅಲ್ಪಸಂಕ್ಯಾತರ ಒಲೈಕೆಗಿಳಿಯಿತು.ಅದೇನೆ  ಇರಲಿ  ಪಕ್ಷದ ಆಂತರಿಕ ವಿಚಾರವೆನ್ನಬಹುದು,ಅದರೆ ಕೇವಲ ವೋಟಿನಾಸೆಗೆ  ಒಂದು ಜನಾಂಗವೆನ್ನೆ ಟೀಕಿಸುವ ನೀಚತನಕ್ಕಿಳಿದಿದ್ದು ಅಕ್ಷ್ಯಮ್ಯ ಅಪರಾಧ.ಇದಕ್ಕೆ ಸೂಕ್ತ ಊದಹರಣೆ ಅಂದರೆ ಇತ್ತೀಚೆಗೆ
ವಿಕಿಲೀಕ್ಸ್ ಬಹಿರಂಗ ಪಡಿಸಿದ ರಹಸ್ಯ ವರಧಿಯಲ್ಲಿ  ಕಾಂಗ್ರೇಸ್ ಯುವರಾಜ ರಾಹುಲ್ ಗಾಂಧಿ "ಭಾರತಕ್ಕೆ ಆಲ್ಕೈದದಂತಹ ಅಲ್ಪಸಂಕ್ಯಾತ ಉಗ್ರಗಾಮಿ ಸಂಘಟನೆಕ್ಕಿಂತ ಹಿಂದು ಉಗ್ರಗಾಮಿಗಳಿಂದ ಅಪಾಯವಿದೆ"ಯೆನ್ನುವ ನಿರ್ಲಜ್ಯ ಹೇಳಿಕೆಯನ್ನು  ಅಮೇರಿಕಕ್ಕೆ ರವಾನಿಸಿದ್ದು.
ಕೇವಲ 33 ವರ್ಷದ ಇಟಾಲಿ-ಇಂಡಿಯನ್ ಯುವಕನೊಬ್ಬ ಸಾವಿರಾರು ವರ್ಷದ ಭವ್ಯಪರಂಪರೆಯನ್ನು ಹೊಂದಿರುವ ಒಂದು ಧರ್ಮವನ್ನೆ ಟೀಕಿಸುವ ನೀಚತನಕ್ಕಿಳಿದಿದ್ದು ವಿಪರ್ಯಾಸವಾದರೂ ಇದು ಸತ್ಯವಾಗಿದೆ
    ಹಿಂದುಸ್ತಾನದಲ್ಲಿ ಹಿಂಧುಗಳನ್ನೆ ಅಲ್ಪಸಂಕ್ಯಾತರನ್ನಾಗಿಸಲು ಹೊರಟಿರುವ ಕಾಂಗ್ರೇಸಗೆ 125 ವರ್ಷತುಂಬುತ್ತಿದ್ದು ,ಈ ಸಂಧರ್ಬದಲ್ಲಿ ಆತ್ಮಾವಲೋಕನಮಾಡಿಕೊಳ್ಳಲು ಪ್ರಶಸ್ತ ಸಮಯವಾಗಿದೆ.ಬ್ರಿಟೀಶರು ಬಿಟ್ಟುಹೋದ "ವಿಭಜಿಸಿ ಆಳುವನೀತಿ"ಯನ್ನ ತ್ಯೇಜಿಸಿ ಅಖಂಡ ಭಾರತದ  ಅಭಿವ್ರಧ್ದಿಯತ್ತ ಗಮನಹರಿಸುವ ಕೆಲಸ ಕಾಂಗ್ರೇಸನಿಂದ ಆಗಬೇಕಾಗಿದೆ