bi

href="http://www.freebiebitcoin.com">Earn

Monday, November 22, 2010

ರಾಜಕೀಯದಲ್ಲಿ ಜಾತಿವಾರು ಪ್ರಾತಿನಿಧ್ಯವೇಕೆ???



                                                 ಮತ್ತೆ ರಾಜಕೀಯದ ಬಗ್ಗೆ ಬರೆಯಲೇ ಬೇಕಾಗಿದೆ..................!!!!!!!!!!!
      ಇಂದು ಸಂಜೆ  ದೂರದರ್ಶನದ ವಾರ್ತಾವಾಹಿನಿಯಲ್ಲಿ  ಸುದ್ದಿಗಳನ್ನು ನೋಡುತ್ತಾ ಕುಳಿತಿದ್ದೆ, ವಾಹಿನಿಯಲ್ಲಿ  ಯಡಿಯೂರಪ್ಪನವರ  ನಾ.........ಕೊಡೆ, ನೀ ..........ಬಿಡೆ,  ಪ್ರಹಸನ ಪ್ರಸಾರವಾಗುತ್ತಿತ್ತು,ಅದರಲ್ಲಿ ಶಿವಮೊಗ್ಗದ ವೀರಶೈವ ಮಠಾಧಿಪತಿಯೊಬ್ಬರು ಮಾತನ್ನಾಡುತ್ತಾ ಯಡಿಯೂರಪ್ಪನವರು  ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಹಾಗಾಗಿ ಕೆಲವು ನಾಯಕರು ಕುತಂತ್ರ ನಡೆಸಿದ್ದಾರೆ, ಈ ಹಿಂದೂ ಸಹ ಯವುದೇ ಲಿಂಗಯತ ಮುಖ್ಯಮಂತ್ರಿಗೆ  ಪೂರ್ಣಾವಧಿ ಆಡಳಿತ ನಡೆಸಲು ಬಿಟ್ಟಿಲ್ಲ, ಇದನ್ನು ಸಹಿಸಲಾಗದೆನ್ನುತ್ತಿದ್ದರು.   ಅದೇ ವೇಳೆ  ಬೆಂಗಳೂರಿನ  ಪ್ರೆಸ್ ಕ್ಲಬ್ ಅವರಣದಲ್ಲಿ  ಸಂದರ್ಶನವಿತ್ತ ಆರೆಂಟು ಮಠಾಧೀಶರು ಹೆಳಿದ್ದು ಇದನ್ನೆ,                                                                                                
  ಛೇ!!!  ಇದೆಂತಹ ನ್ಯಾಯ!  ಸಮಾಜದ ಒಳಿತಿಗಾಗಿ ಮಾರ್ಗದರ್ಶನ ನೀಡಬೇಕಾದ  ಮಠಾಧೀಶರು  ಬೋಧಿಸುವುದು ಒಡೆದು ಆಳುವ ನೀತಿಯನ್ನ!!!!,
  ನಾನು ಇದನ್ನು ಕೇವಲ ಒಂದು ಸುಮುದಾಯಕ್ಕೆ ಅನುಗಣಿಸಿ ಹೆಳುತ್ತಿಲ್ಲ  ನಮ್ಮ ಯಲ್ಲಾ ಸಮುದಾಯದವರೂಇದೇನೀತಿಯನ್ನ ಸಂದರ್ಬಕ್ಕೆ ಅನುಗುಣವಾಗಿ ಬಳಸುತ್ತಾ ಬಂದಿದ್ದಾರೆ. ತಮ್ಮ ಸಮುದಾಯದ  ವ್ಯಕ್ತಿಯ ಬಗ್ಗೆ ಅಭಿಮಾನವಿರಲಿ ಅದರೆ ಅವನು ಮಾಡಿದ್ದೆಲ್ಲಾ ಸರಿಯನ್ನುವುದು ಮೌಡ್ಯವಲ್ಲವೆ?  ಪ್ರಪಂಚದಯಲ್ಲಾ  ಧರ್ಮಕ್ಕೂ ಹಿಂಧೂಧರ್ಮ ಶ್ರೇಷ್ಠವೆಂದು ತೋರಿಸಿಕೊಟ್ಟ ಸ್ವಾಮಿ ವಿವೇಕಾನಂಧರ ಏಕತಾ ತತ್ವ ಇವರಿಗೇಕೆ ಅರ್ಥವಾಗುವುದಿಲ್ಲ????  ಮುಸ್ಲಿಮ್, ಕ್ರೈಸ್ತ ದರ್ಮಗಳಲ್ಲಿ ಹಲವಾರು ಜಾತಿ-ಪಂಗಡಗಳಿದ್ದರೂ, ನಾನು ಮುಸ್ಲಿಮ್,ನಾನು ಕ್ರೈಸ್ತ ಯಂದು ಏಕತಾಬಾವದಿಂದ ಮೆರೆಯುತ್ತಿಲ್ಲವೆ? ಇದು ನಮ್ಮವರಿಗೇಕೆ      ಅರ್ಥವಾಗುವುದಿಲ್ಲ???? 

    ಇಂದು ಜಾತಿವಾರು ವಿಂಘಡನೆ ಕೇವಲ ಮಠಮಾನ್ಯಗಳಿಗೆ ಸೀಮಿತವಗಿಲ್ಲಾ,ಇದು ಸರ್ವವ್ಯಾಪಿಯಗಿ ಬೆಳೆದಿದೆ.ಕೆಲವು ಪಟ್ಟಬದ್ರ ಹಿತಾಸಕ್ತಿಗಳು ತಮ್ಮ ಬೇಳೆಬೇಯಿಸಿಕೊಳ್ಳಲು ಇದನ್ನು ಶಿಕ್ಷಣ,ರಾಜಕೀಯದಂತಹ ಮಹತ್ವದ ಕ್ಷೇತ್ರದಲ್ಲಿ ಹಬ್ಬಿಸುತ್ತಿದ್ದು , ಯೋಗ್ಯತೆ ಯನ್ನುವ ಪದ ಅರ್ಥಕಳೆದುಕೊಳ್ಳುತ್ತಿದೆ.

Wednesday, November 17, 2010

ಯಡ್ಡಿ ಗುಂಪಿಗೆ ಚಡ್ಡಿಯಾದರು ಬುದ್ದಿ ಹೇಳಬಾರದೆ !!!!!!!!

           ರಾಜಕೀಯದ ಬಗ್ಗೆ  ಬರೆಯಲೇ ಬೇಜಾರು ಅನಿಸುತ್ತಿದೆ,ಅದರಲ್ಲು  ಕರ್ನಾಟಕದ ರಾಜಕೀಯ ಕೊಳೆತು  ಗಬ್ಬು ವಾಸನೆ ಬೀರುತ್ತಿದೆ. ಕರ್ನಾಟಕದಲ್ಲಿ .
ಇಷ್ಟೆಲ್ಲಾ  ಕರ್ಮಕಾಂಡ ನಡೆಯುತ್ತಿದ್ದರು  ಕೇಂದ್ರಸರ್ಕಾರ  ಕಣ್ಮುಚ್ಚಿ ನಿದ್ರೆ ಮಡುತ್ತಿದೆ. ರಾಜ್ಯದಲ್ಲಿ ತಳಮಟ್ಟದಿಂದ ಹಿಡಿದು ಮೇಲ್ಮಟ್ಟದವರೆಗೂ  ಲಂಚ ,ಬ್ರಷ್ಟಾಚಾರ  ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಸಂದರ್ಬದಲ್ಲಿ  ವಿಜಯಕರ್ನಾಟ ದಿನಪತ್ರಿಕೆಯ ಒಂದು ಸಂಪಾದಕೀಯ ಪ್ರಸ್ತುತವೆನಿಸುತ್ತಿದೆ ಅದು ಬಿಹಾರದ ಸಂಪಾದಕರೊಬ್ಬರು  ಕಳುಹಿಸಿದ ವಾಚಕರ ಪತ್ರವಾಗಿದ್ದು  ಬರೆಯುತ್ತಾರೆ " ಬಿಹಾರವು ದಶಕದಿಂದಲೂ ಬ್ರಷ್ಟಾಚಾರ ರಾಜ್ಯವೆಂದು ಪ್ರಕ್ಯಾತವಾಗಿದ್ದು ,ಬ್ರಷ್ಟಾಚಾರಕ್ಕೆ ಅನ್ವರ್ತಕ ನಾಮವಾಗಿ ಬಿಹಾರವನ್ನು ಬಳಸಲಗುತ್ತಿದೆ, ಅದು ಸರಿಯಲ್ಲ ,ಇನ್ನುಮುಂದೆ  ಈ ಬಿರುದನ್ನು ಕರ್ನಾಟಕಕ್ಕೆ ದಯಪಾಲಿಸಬೆಕಾಗಿ ವಿನಂತಿ".   ಜೈ   ಕರ್ನಾಟಕಮಾತೆ!!!!!!!!

ಕರ್ನಾಟಕದಲ್ಲಿ  ಜೆಡಿಸ್ ಬಿಜೆಪಿ ಸರ್ಕಾರ ಪ್ರಾರಂಬವಾದಾಗ ಜನತೆ ಒಂದುರೀತಿಯ ಆಶಾಬಾವನೆಯಿಂದ ನೋಡತೊಡಗಿದ್ದರು.ಕೊನೆಯಲ್ಲಿ ಜೆಡಿಸ್ ಬಿಜೇಪಿಗೆ ಅಧಿಕಾರ ಹಸ್ತಾತರಿಸದೆ ಕೊನೆಗೊಂಡಾಗ ಸಹಜವಾಗಿ ಬಿಜೆಪಿಗೆ ಅನುಂಪದ ಅಲೆ ಪ್ರಾಪ್ತವಾಗಿ  ಅಧಿಕಾರಕ್ಕೆ ಬಂದ ಬಿಜೆಪಿಯು ಅಧಿಕಾರ
ಬಲವರ್ದನೆಗೆ  ಕುದುರೆವ್ಯಾಪಾರದಂತಹ ಹೇಯಕ್ರತ್ಯಕ್ಕೆ ಕೈ ಹಾಕಿತು.ಇಲ್ಲಿಯವರೆಗು ಗುಟ್ಟಾಗಿ ನಡೆಯುತ್ತಿದ್ದ ಈ ವ್ಯವಹಾರಗಳು ರಜಾರೋಶವಾಗಿ ನಡೆಯತೊಡಗಿತು. ರೆಸಾರ್ಟ್ ಯಾತ್ರೆ ,ಕುದುರೆವ್ಯಾಪಾರದಂತಹ ಹೀನಕ್ರತ್ಯಗಳುನ್ನು  ಪ್ರತಿಪಕ್ಷಗಳು ಈ ಹಿಂದೆ ನಡೆಸಿದ್ದರೂ ಸಹ ಗುಪ್ತವಾಗಿರುತ್ತಿದ್ದವು ಅದರೆ ಇದು ಬೀದಿಗೆ ಬಂದಿದ್ದು ಬಿಜೆಪಿ ಅವದಿಯಲ್ಲಿ,  ಧ್ಯೇಯನಿಷ್ಟ ಸತ್ಯಸಂದತೆಗೆ ಹೆಸರಾದ ರಾಷ್ಟೀಯ ಸ್ವಯಂಸೇವಕ ಸಂಗದ ರಾಜಕೀಯ ಅಂಗಸಂಸ್ತೆ ಯಾದ ಬಿಜೆಪಿಯು ಇಷ್ಟೆಲ್ಲಾ ಅವ್ಯವಹಾರ ನಡೆಸುತ್ತಿದ್ದರು ಸಂಗ ಕಣ್ ಮುಚ್ಚಿ ನೋಡತೊಡಗಿತು, ಈ ಬಗ್ಗೆ ವ್ಯಾಪಕ ಪ್ರತಿಭಟನೆ ಚರ್ಚೆಗಳಾದಾಗ ಸಂಗದ ಪ್ರಾಂತ ಪ್ರಚಾರಕರಾದ ಮುಂಕುದರವರು ಪತ್ರಿಕೆಯಲ್ಲಿ ತಮ್ಮ ಅಸಾಹಯಕತೆಯನ್ನು ತೋಡಿಕೊಂಡರು ಯಾವುದೇ ಕಾರ್ಯರೂಪಕ್ಕೆ ಬರಲಿಲ್ಲ.                                                                                        
 
ತನಗೆ ಬೇಕೆಂದಾಗ  ಅಡ್ವಾನಿಯಂತಹ ಪ್ರಮುಖ ನಾಯಕರನ್ನೆ ಕೆಳಗಿಳಿಸಿ  ನಿತಿನ್ ಗಡ್ಕಿರಿಯವರನ್ನು  ಅಧ್ಯಕ್ಷಸ್ತಾನಕ್ಕೆ ತಂದ ಸಂಗವು,  ಕರ್ನಾಟಕದಲ್ಲಿ ಬಿಜೆಪಿ ಮಾತುಕೇಳುವುದಿಲ್ಲ ಹೇಳುವುದು ಹಸ್ಯಾಸ್ಪದವಲ್ಲವೆ?  ನಾನು  ಸಂಗಕ್ಕೆ ಹೊರಗಿನವನಾಗಿ ಈ ಮಾತು ಬರೆಯುತ್ತಿಲ್ಲಾ, ನಾಲ್ಕೈದು ವರ್ಷ ಸಕ್ರೀಯ ಸ್ವಯಂಸೇವಕನಾಗಿದ್ದ ನಾನು  ಸಂಗದ ಧ್ಯೇಯ, ಆದರ್ಶ,ಒಳಹೊರಗುಗಳನ್ನು  ಅರಿತು ಬರೆಯುತ್ತಿದ್ದೆನೆ.ಸಂಗ ಮನಸ್ಸುಮಾಡಿದರೆ ಕರ್ನಾಟಕದ ಬಿಜೆಪಿಗೆ  ಕಿವಿಹಿಂಡಲು ಸಶಕ್ತವಾಗಿದ್ದು  ಇನ್ನು ಆ ಕಾರ್ಯ ವಿಳಂಬವೇಕಾಗುತ್ತಿದೆ ಎನ್ನ್ನುವುದು ಪ್ರಶ್ನೆಯಾಗೆಯುಳಿದಿದೆ.

ಚೋಟ್ ಮೆಣಸಿನಕಾಯ್:ಪ್ರತಿಪಕ್ಷದ ನಾಯಕರೂ ಭೂಹಗರಣದಲ್ಲಿ ಭಾಗಿ  --ಯಡಿಯೂರಪ್ಪ                                      
                                     ನಾಯಿ  ನಮಗೆ ಕಚ್ಹಿತೆಂದು ನಾವು ನಾಯಿಗೆ ಕಚ್ಚಲಾಗುವುದೆ?????!!!!!!!!!!!

Sunday, November 14, 2010

ದೀಪಾವಳಿ ಪಟಾಕಿಗಳು

ದೀಪಾವಳಿ ಅಂದಾಕ್ಷಣ ನೆನಪಿಗೆ ಬರುವುದು ಪಟಾಕಿ, ಚಿನ್ನರಿಂದ ಹಿಡಿದು ಮನೆಮಂದಿಯಲ್ಲ ಸಿಡಿಸಿ ಸಂತೋಷಪಡುವ  ಈ ಪಟಾಕಿ ಮೊದಲು ಪ್ರಾರಂಬವಾದುದ್ದು ಚೈನಾದಲ್ಲಿ ,ಕ್ರಮೇಣ ಪ್ರಪಂಚಾದ್ಯಂತ ಪ್ರಸರಿಸಿತು.  

ಇಂದು ಪಟಾಕಿ  ಸುಡುವುದರ ಬಗ್ಗೆ  ಪರ ಹಾಗು ವಿರೋಧ ಅನಿಸಿಕೆಗಳಿವೆ ,ಅದೇನೆ ಇರಲಿ  ಪ್ರತಿ ವರ್ಷ ಪಟಾಕಿ ವಹಿವಾಟು ಹೆಚ್ಚುತ್ತಲೆ ಇದೆ.ಭಾರತದಲ್ಲಿ  ಅತಿ ಹೆಚ್ಚು ಪಟಾಕಿ ತಯಾರಾಗುವುದು ತಮೀಳನಾಡಿನ ಶಿವಕಾಶಿಯಲ್ಲಿ ಅಲ್ಲಿ ಸುಮಾರು  200ಕ್ಕು ಹೆಚ್ಚು ಕಂಪನಿಗಳು ಕಾರ್ಯನಿರತವಗಿವೆ.      ಪಟಾಕಿಯಲ್ಲಿನ   ಮೂಲವಸ್ತು ಗಂಧಕ ಹಾಗು ಅದರ ಸಂಯುಕ್ತ.  ಇದು  ಔಷಧೀಯ ಗುಣಗಳನ್ನು ಹೊಂದಿದ್ದು  ಚರ್ಮರೋಗ ನಿವಾರಣೆಗೆ ಹಾಗು ಕೀಟನಾಶಕವಾಗಿಯೂ ಬಳಸುತ್ತಾರೆ. ನಮ್ಮ ಪೂರ್ವಜರು ಬಳಕೆಗೆ ತಂದ  ಈ  ಅಚರಣೆ  ವೈಜ್ನಾನಿಕ  ತಳಹದಿಯ ಮೇಲೆ ರೂಪಿತವಗಿದೆ. ದೀಪಾವಳಿಯ ಸಮಯದಲ್ಲಿ  ಪೈರುಗಲೆಲ್ಲ  ಬೆಳೆದು ನಿಂತಿದ್ದು, ಭೂಮಿ ತೇವಾಂಶದಿಂದ ಕೂಡಿರುತ್ತದೆ.                  

     ಈ ವಾತಾವರಣದಲ್ಲಿ  ಬೆಳೆಗಳಿಗೆ ಕೀಟಬಾಧೆಯು ಅಧಿಕವಾಗಿರುತ್ತಿದ್ದು., ಇಂತಹ ಸಮಯದಲ್ಲಿ ಪಟಾಕಿ ಸಿಡಿಸುವದರಿಂದ  ಅದರಲ್ಲಿನ ಗಂಧಕ ಗಾಳಿಯಲ್ಲಿ ಬೆರೆತು ಕೀಟಭಾಧೆ ತಗ್ಗಿಸುತ್ತದೆ. ಇಂತಹ  ಅದೆಸ್ಟೋ ಆಚರಣಗಳನ್ನು   ನಾವು ಅನುಸರಿಸುತ್ತಿದ್ದು  ಅದರ ಮೂಲ ಉದ್ದೇಶ ತಿಳಯದೆ  ಅಂಧಾನುಕರಣೆಯಲ್ಲಿ ತೊಡಗಿರುವುದು ವಿಪರ್ಯಾಸ


ಕೊನೆ ಹನಿ: ಪಟಾಕಿ ಸುಡುವುದು ದೇಶದ್ರೋಹವೆನ್ನುವಂತೆ ಮಾತನ್ನಾಡುವ ಪರಿಸರ ಬುದ್ದಿಜೀವಿಗಳು  ವಾಹನಗಳು ಉಗುಳುವ ಹೊಗೆ ಬಗ್ಗಾಗಲಿ, ಅರಣ್ಯನಾಶ,ಬೋಪಾಲ್  ಅನೀಲದುರಂತದ ಬಗ್ಗಾಗಲಿ ಮಾತನ್ನಾಡುವುದಿಲ್ಲ  ಏಕೆಂದರೆ ಈ ಹಿಂದೆ ಅವರು ಓಡಿಸಿದ್ದು  ಅತಿಹೆಚ್ಚು ಹೊಗೆ ಉಗಳುವ ಕೈನೊಟಿಕ್,ಜಾವ,ವೆಸ್ಪಾ ಗಳನ್ನ, ಈಗ ಅವರ ಮಕ್ಕಳು ಯು.ಏಸ್.ವಿ ಯಂತಹ  ಸ್ಪೋರ್ಟ್ಸ್  ವಾಹನ ಓಡಿಸುತ್ತಾರೆ.







Saturday, October 30, 2010

ಅಪರೂಪದ ಪಕ್ಷಿಗಳು











.ಗೆಳೆಯನೊಬ್ಬ ಕಳುಹಿಸಿದ  ಇಮೇಲ್ ನಲ್ಲಿ ದೊರೆತ ಪೋಟೊಗಳಿವು ಎಸ್ಟು ಸುಂದರವಗಿದೆ  ಅಲ್ವ  ಇಂತಹ ಎಸ್ಟೋ ಸುಂದರ ಪಕ್ಷಿಗಳು  ಪಶ್ಚಿಮ ಗಟ್ಟಗಳ ಕಾಡುಗಳಲ್ಲಿ ವಿನಾಶದ ಅಂಚಿನಲ್ಲಿದೆ. ಬೇಡ್ತಿ-ಅಗನಾಶಿನಿ,ಕೈಗಾ ಅಣುವಿದ್ಯುತ್ ಸ್ತಾವರ,ಮರಗಳ್ಳತನ,ಮುಂತಾದ ಪರಿಸರನಾಶಿ ಯೋಜನೆಗಳು ವನ್ಯಪ್ರಾಣಿಗಳನ್ನು ಹಿಂಡಿಹಿಪ್ಪೆ ಮಾಡಿವೆ. ಅಸ್ಟೇ ಏಕೆ ಮೊಬೈಲ್  ತರಂಗಾತರದ ಹೊಡೆತಕ್ಕೆ ಸಿಕ್ಕಿ ರೈತ ಸ್ನೀಹಿಯಾಗಿದ್ದ ಗುಬ್ಬಿಗಳಿಂದು ಕಣ್ಮರೆ ಅಗುತ್ತಿವೆ. ಇದು ಹೀಗೆ  ಮುಂದುವರೆದರೆ  ನಮ್ಮ ಮುಂದಿನ ಪೀಳೀಗೆ ವನ್ಯಪ್ರಾಣಿಗಳನ್ನು ಕೇವಲ ಪೋಟೋದಲ್ಲಿ ಮಾತ್ರ ನೋಡಬೇಕಾದ ಪರಿಸ್ತಿತಿ ಬಂದೀತು ,ಹಾಗಾಗಿ ಅರಣ್ಯಸಂಕುಲವನ್ನು ರಕ್ಷಿಸಿ ಪೋಶಿಸಬೇಬೆಕಾದುದ್ದು ನಮ್ಮ ನಿಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ