ಇಷ್ಟೆಲ್ಲಾ ಕರ್ಮಕಾಂಡ ನಡೆಯುತ್ತಿದ್ದರು ಕೇಂದ್ರಸರ್ಕಾರ ಕಣ್ಮುಚ್ಚಿ ನಿದ್ರೆ ಮಡುತ್ತಿದೆ. ರಾಜ್ಯದಲ್ಲಿ ತಳಮಟ್ಟದಿಂದ ಹಿಡಿದು ಮೇಲ್ಮಟ್ಟದವರೆಗೂ ಲಂಚ ,ಬ್ರಷ್ಟಾಚಾರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಸಂದರ್ಬದಲ್ಲಿ ವಿಜಯಕರ್ನಾಟ ದಿನಪತ್ರಿಕೆಯ ಒಂದು ಸಂಪಾದಕೀಯ ಪ್ರಸ್ತುತವೆನಿಸುತ್ತಿದೆ ಅದು ಬಿಹಾರದ ಸಂಪಾದಕರೊಬ್ಬರು ಕಳುಹಿಸಿದ ವಾಚಕರ ಪತ್ರವಾಗಿದ್ದು ಬರೆಯುತ್ತಾರೆ " ಬಿಹಾರವು ದಶಕದಿಂದಲೂ ಬ್ರಷ್ಟಾಚಾರ ರಾಜ್ಯವೆಂದು ಪ್ರಕ್ಯಾತವಾಗಿದ್ದು ,ಬ್ರಷ್ಟಾಚಾರಕ್ಕೆ ಅನ್ವರ್ತಕ ನಾಮವಾಗಿ ಬಿಹಾರವನ್ನು ಬಳಸಲಗುತ್ತಿದೆ, ಅದು ಸರಿಯಲ್ಲ ,ಇನ್ನುಮುಂದೆ ಈ ಬಿರುದನ್ನು ಕರ್ನಾಟಕಕ್ಕೆ ದಯಪಾಲಿಸಬೆಕಾಗಿ ವಿನಂತಿ". ಜೈ ಕರ್ನಾಟಕಮಾತೆ!!!!!!!!
ಕರ್ನಾಟಕದಲ್ಲಿ ಜೆಡಿಸ್ ಬಿಜೆಪಿ ಸರ್ಕಾರ ಪ್ರಾರಂಬವಾದಾಗ ಜನತೆ ಒಂದುರೀತಿಯ ಆಶಾಬಾವನೆಯಿಂದ ನೋಡತೊಡಗಿದ್ದರು.ಕೊನೆಯಲ್ಲಿ ಜೆಡಿಸ್ ಬಿಜೇಪಿಗೆ ಅಧಿಕಾರ ಹಸ್ತಾತರಿಸದೆ ಕೊನೆಗೊಂಡಾಗ ಸಹಜವಾಗಿ ಬಿಜೆಪಿಗೆ ಅನುಂಪದ ಅಲೆ ಪ್ರಾಪ್ತವಾಗಿ ಅಧಿಕಾರಕ್ಕೆ ಬಂದ ಬಿಜೆಪಿಯು ಅಧಿಕಾರ
ಬಲವರ್ದನೆಗೆ ಕುದುರೆವ್ಯಾಪಾರದಂತಹ ಹೇಯಕ್ರತ್ಯಕ್ಕೆ ಕೈ ಹಾಕಿತು.ಇಲ್ಲಿಯವರೆಗು ಗುಟ್ಟಾಗಿ ನಡೆಯುತ್ತಿದ್ದ ಈ ವ್ಯವಹಾರಗಳು ರಜಾರೋಶವಾಗಿ ನಡೆಯತೊಡಗಿತು. ರೆಸಾರ್ಟ್ ಯಾತ್ರೆ ,ಕುದುರೆವ್ಯಾಪಾರದಂತಹ ಹೀನಕ್ರತ್ಯಗಳುನ್ನು ಪ್ರತಿಪಕ್ಷಗಳು ಈ ಹಿಂದೆ ನಡೆಸಿದ್ದರೂ ಸಹ ಗುಪ್ತವಾಗಿರುತ್ತಿದ್ದವು ಅದರೆ ಇದು ಬೀದಿಗೆ ಬಂದಿದ್ದು ಬಿಜೆಪಿ ಅವದಿಯಲ್ಲಿ, ಧ್ಯೇಯನಿಷ್ಟ ಸತ್ಯಸಂದತೆಗೆ ಹೆಸರಾದ ರಾಷ್ಟೀಯ ಸ್ವಯಂಸೇವಕ ಸಂಗದ ರಾಜಕೀಯ ಅಂಗಸಂಸ್ತೆ ಯಾದ ಬಿಜೆಪಿಯು ಇಷ್ಟೆಲ್ಲಾ ಅವ್ಯವಹಾರ ನಡೆಸುತ್ತಿದ್ದರು ಸಂಗ ಕಣ್ ಮುಚ್ಚಿ ನೋಡತೊಡಗಿತು, ಈ ಬಗ್ಗೆ ವ್ಯಾಪಕ ಪ್ರತಿಭಟನೆ ಚರ್ಚೆಗಳಾದಾಗ ಸಂಗದ ಪ್ರಾಂತ ಪ್ರಚಾರಕರಾದ ಮುಂಕುದರವರು ಪತ್ರಿಕೆಯಲ್ಲಿ ತಮ್ಮ ಅಸಾಹಯಕತೆಯನ್ನು ತೋಡಿಕೊಂಡರು ಯಾವುದೇ ಕಾರ್ಯರೂಪಕ್ಕೆ ಬರಲಿಲ್ಲ.
ತನಗೆ ಬೇಕೆಂದಾಗ ಅಡ್ವಾನಿಯಂತಹ ಪ್ರಮುಖ ನಾಯಕರನ್ನೆ ಕೆಳಗಿಳಿಸಿ ನಿತಿನ್ ಗಡ್ಕಿರಿಯವರನ್ನು ಅಧ್ಯಕ್ಷಸ್ತಾನಕ್ಕೆ ತಂದ ಸಂಗವು, ಕರ್ನಾಟಕದಲ್ಲಿ ಬಿಜೆಪಿ ಮಾತುಕೇಳುವುದಿಲ್ಲ ಹೇಳುವುದು ಹಸ್ಯಾಸ್ಪದವಲ್ಲವೆ? ನಾನು ಸಂಗಕ್ಕೆ ಹೊರಗಿನವನಾಗಿ ಈ ಮಾತು ಬರೆಯುತ್ತಿಲ್ಲಾ, ನಾಲ್ಕೈದು ವರ್ಷ ಸಕ್ರೀಯ ಸ್ವಯಂಸೇವಕನಾಗಿದ್ದ ನಾನು ಸಂಗದ ಧ್ಯೇಯ, ಆದರ್ಶ,ಒಳಹೊರಗುಗಳನ್ನು ಅರಿತು ಬರೆಯುತ್ತಿದ್ದೆನೆ.ಸಂಗ ಮನಸ್ಸುಮಾಡಿದರೆ ಕರ್ನಾಟಕದ ಬಿಜೆಪಿಗೆ ಕಿವಿಹಿಂಡಲು ಸಶಕ್ತವಾಗಿದ್ದು ಇನ್ನು ಆ ಕಾರ್ಯ ವಿಳಂಬವೇಕಾಗುತ್ತಿದೆ ಎನ್ನ್ನುವುದು ಪ್ರಶ್ನೆಯಾಗೆಯುಳಿದಿದೆ.
ಚೋಟ್ ಮೆಣಸಿನಕಾಯ್:ಪ್ರತಿಪಕ್ಷದ ನಾಯಕರೂ ಭೂಹಗರಣದಲ್ಲಿ ಭಾಗಿ --ಯಡಿಯೂರಪ್ಪ
ನಾಯಿ ನಮಗೆ ಕಚ್ಹಿತೆಂದು ನಾವು ನಾಯಿಗೆ ಕಚ್ಚಲಾಗುವುದೆ?????!!!!!!!!!!!
Hi Santosh.. artical tumba chennagide. sanghada obba sakreeya karyakarta nada nanagu kooda neevu kelida prashneye kaduttide, yelladarallu Shistannu noduva matte nedesikondu hoguva shakti iruva sanghavu yake meena mesha enisutide ...!!??
ReplyDeleteHarish Hegde
ದನ್ಯವಾದ ಹರೀಶ್, ಕಾಲಾಯ ತಸ್ಮೈ ನಮಃ ಯನ್ನುವಂತೆ ಸಂಘದ ಸರಸಂಘಚಾಲಕರು ಬದಲಾದಂತೆ ಅದರ ಮನೋಭಾವನೆಗಳು ಬದಲಾಗಿರಬಹುದು ಕಾದುನೋಡೋಣ, ಏಕೆಂದರೆ ನಮ್ಮಲ್ಲಿ ಅನ್ಯಮಾರ್ಗವಿಲ್ಲವಾಗಿದೆ
ReplyDelete