bi

href="http://www.freebiebitcoin.com">Earn

Sunday, November 14, 2010

ದೀಪಾವಳಿ ಪಟಾಕಿಗಳು

ದೀಪಾವಳಿ ಅಂದಾಕ್ಷಣ ನೆನಪಿಗೆ ಬರುವುದು ಪಟಾಕಿ, ಚಿನ್ನರಿಂದ ಹಿಡಿದು ಮನೆಮಂದಿಯಲ್ಲ ಸಿಡಿಸಿ ಸಂತೋಷಪಡುವ  ಈ ಪಟಾಕಿ ಮೊದಲು ಪ್ರಾರಂಬವಾದುದ್ದು ಚೈನಾದಲ್ಲಿ ,ಕ್ರಮೇಣ ಪ್ರಪಂಚಾದ್ಯಂತ ಪ್ರಸರಿಸಿತು.  

ಇಂದು ಪಟಾಕಿ  ಸುಡುವುದರ ಬಗ್ಗೆ  ಪರ ಹಾಗು ವಿರೋಧ ಅನಿಸಿಕೆಗಳಿವೆ ,ಅದೇನೆ ಇರಲಿ  ಪ್ರತಿ ವರ್ಷ ಪಟಾಕಿ ವಹಿವಾಟು ಹೆಚ್ಚುತ್ತಲೆ ಇದೆ.ಭಾರತದಲ್ಲಿ  ಅತಿ ಹೆಚ್ಚು ಪಟಾಕಿ ತಯಾರಾಗುವುದು ತಮೀಳನಾಡಿನ ಶಿವಕಾಶಿಯಲ್ಲಿ ಅಲ್ಲಿ ಸುಮಾರು  200ಕ್ಕು ಹೆಚ್ಚು ಕಂಪನಿಗಳು ಕಾರ್ಯನಿರತವಗಿವೆ.      ಪಟಾಕಿಯಲ್ಲಿನ   ಮೂಲವಸ್ತು ಗಂಧಕ ಹಾಗು ಅದರ ಸಂಯುಕ್ತ.  ಇದು  ಔಷಧೀಯ ಗುಣಗಳನ್ನು ಹೊಂದಿದ್ದು  ಚರ್ಮರೋಗ ನಿವಾರಣೆಗೆ ಹಾಗು ಕೀಟನಾಶಕವಾಗಿಯೂ ಬಳಸುತ್ತಾರೆ. ನಮ್ಮ ಪೂರ್ವಜರು ಬಳಕೆಗೆ ತಂದ  ಈ  ಅಚರಣೆ  ವೈಜ್ನಾನಿಕ  ತಳಹದಿಯ ಮೇಲೆ ರೂಪಿತವಗಿದೆ. ದೀಪಾವಳಿಯ ಸಮಯದಲ್ಲಿ  ಪೈರುಗಲೆಲ್ಲ  ಬೆಳೆದು ನಿಂತಿದ್ದು, ಭೂಮಿ ತೇವಾಂಶದಿಂದ ಕೂಡಿರುತ್ತದೆ.                  

     ಈ ವಾತಾವರಣದಲ್ಲಿ  ಬೆಳೆಗಳಿಗೆ ಕೀಟಬಾಧೆಯು ಅಧಿಕವಾಗಿರುತ್ತಿದ್ದು., ಇಂತಹ ಸಮಯದಲ್ಲಿ ಪಟಾಕಿ ಸಿಡಿಸುವದರಿಂದ  ಅದರಲ್ಲಿನ ಗಂಧಕ ಗಾಳಿಯಲ್ಲಿ ಬೆರೆತು ಕೀಟಭಾಧೆ ತಗ್ಗಿಸುತ್ತದೆ. ಇಂತಹ  ಅದೆಸ್ಟೋ ಆಚರಣಗಳನ್ನು   ನಾವು ಅನುಸರಿಸುತ್ತಿದ್ದು  ಅದರ ಮೂಲ ಉದ್ದೇಶ ತಿಳಯದೆ  ಅಂಧಾನುಕರಣೆಯಲ್ಲಿ ತೊಡಗಿರುವುದು ವಿಪರ್ಯಾಸ


ಕೊನೆ ಹನಿ: ಪಟಾಕಿ ಸುಡುವುದು ದೇಶದ್ರೋಹವೆನ್ನುವಂತೆ ಮಾತನ್ನಾಡುವ ಪರಿಸರ ಬುದ್ದಿಜೀವಿಗಳು  ವಾಹನಗಳು ಉಗುಳುವ ಹೊಗೆ ಬಗ್ಗಾಗಲಿ, ಅರಣ್ಯನಾಶ,ಬೋಪಾಲ್  ಅನೀಲದುರಂತದ ಬಗ್ಗಾಗಲಿ ಮಾತನ್ನಾಡುವುದಿಲ್ಲ  ಏಕೆಂದರೆ ಈ ಹಿಂದೆ ಅವರು ಓಡಿಸಿದ್ದು  ಅತಿಹೆಚ್ಚು ಹೊಗೆ ಉಗಳುವ ಕೈನೊಟಿಕ್,ಜಾವ,ವೆಸ್ಪಾ ಗಳನ್ನ, ಈಗ ಅವರ ಮಕ್ಕಳು ಯು.ಏಸ್.ವಿ ಯಂತಹ  ಸ್ಪೋರ್ಟ್ಸ್  ವಾಹನ ಓಡಿಸುತ್ತಾರೆ.







No comments:

Post a Comment