bi

href="http://www.freebiebitcoin.com">Earn

Monday, November 22, 2010

ರಾಜಕೀಯದಲ್ಲಿ ಜಾತಿವಾರು ಪ್ರಾತಿನಿಧ್ಯವೇಕೆ???



                                                 ಮತ್ತೆ ರಾಜಕೀಯದ ಬಗ್ಗೆ ಬರೆಯಲೇ ಬೇಕಾಗಿದೆ..................!!!!!!!!!!!
      ಇಂದು ಸಂಜೆ  ದೂರದರ್ಶನದ ವಾರ್ತಾವಾಹಿನಿಯಲ್ಲಿ  ಸುದ್ದಿಗಳನ್ನು ನೋಡುತ್ತಾ ಕುಳಿತಿದ್ದೆ, ವಾಹಿನಿಯಲ್ಲಿ  ಯಡಿಯೂರಪ್ಪನವರ  ನಾ.........ಕೊಡೆ, ನೀ ..........ಬಿಡೆ,  ಪ್ರಹಸನ ಪ್ರಸಾರವಾಗುತ್ತಿತ್ತು,ಅದರಲ್ಲಿ ಶಿವಮೊಗ್ಗದ ವೀರಶೈವ ಮಠಾಧಿಪತಿಯೊಬ್ಬರು ಮಾತನ್ನಾಡುತ್ತಾ ಯಡಿಯೂರಪ್ಪನವರು  ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಹಾಗಾಗಿ ಕೆಲವು ನಾಯಕರು ಕುತಂತ್ರ ನಡೆಸಿದ್ದಾರೆ, ಈ ಹಿಂದೂ ಸಹ ಯವುದೇ ಲಿಂಗಯತ ಮುಖ್ಯಮಂತ್ರಿಗೆ  ಪೂರ್ಣಾವಧಿ ಆಡಳಿತ ನಡೆಸಲು ಬಿಟ್ಟಿಲ್ಲ, ಇದನ್ನು ಸಹಿಸಲಾಗದೆನ್ನುತ್ತಿದ್ದರು.   ಅದೇ ವೇಳೆ  ಬೆಂಗಳೂರಿನ  ಪ್ರೆಸ್ ಕ್ಲಬ್ ಅವರಣದಲ್ಲಿ  ಸಂದರ್ಶನವಿತ್ತ ಆರೆಂಟು ಮಠಾಧೀಶರು ಹೆಳಿದ್ದು ಇದನ್ನೆ,                                                                                                
  ಛೇ!!!  ಇದೆಂತಹ ನ್ಯಾಯ!  ಸಮಾಜದ ಒಳಿತಿಗಾಗಿ ಮಾರ್ಗದರ್ಶನ ನೀಡಬೇಕಾದ  ಮಠಾಧೀಶರು  ಬೋಧಿಸುವುದು ಒಡೆದು ಆಳುವ ನೀತಿಯನ್ನ!!!!,
  ನಾನು ಇದನ್ನು ಕೇವಲ ಒಂದು ಸುಮುದಾಯಕ್ಕೆ ಅನುಗಣಿಸಿ ಹೆಳುತ್ತಿಲ್ಲ  ನಮ್ಮ ಯಲ್ಲಾ ಸಮುದಾಯದವರೂಇದೇನೀತಿಯನ್ನ ಸಂದರ್ಬಕ್ಕೆ ಅನುಗುಣವಾಗಿ ಬಳಸುತ್ತಾ ಬಂದಿದ್ದಾರೆ. ತಮ್ಮ ಸಮುದಾಯದ  ವ್ಯಕ್ತಿಯ ಬಗ್ಗೆ ಅಭಿಮಾನವಿರಲಿ ಅದರೆ ಅವನು ಮಾಡಿದ್ದೆಲ್ಲಾ ಸರಿಯನ್ನುವುದು ಮೌಡ್ಯವಲ್ಲವೆ?  ಪ್ರಪಂಚದಯಲ್ಲಾ  ಧರ್ಮಕ್ಕೂ ಹಿಂಧೂಧರ್ಮ ಶ್ರೇಷ್ಠವೆಂದು ತೋರಿಸಿಕೊಟ್ಟ ಸ್ವಾಮಿ ವಿವೇಕಾನಂಧರ ಏಕತಾ ತತ್ವ ಇವರಿಗೇಕೆ ಅರ್ಥವಾಗುವುದಿಲ್ಲ????  ಮುಸ್ಲಿಮ್, ಕ್ರೈಸ್ತ ದರ್ಮಗಳಲ್ಲಿ ಹಲವಾರು ಜಾತಿ-ಪಂಗಡಗಳಿದ್ದರೂ, ನಾನು ಮುಸ್ಲಿಮ್,ನಾನು ಕ್ರೈಸ್ತ ಯಂದು ಏಕತಾಬಾವದಿಂದ ಮೆರೆಯುತ್ತಿಲ್ಲವೆ? ಇದು ನಮ್ಮವರಿಗೇಕೆ      ಅರ್ಥವಾಗುವುದಿಲ್ಲ???? 

    ಇಂದು ಜಾತಿವಾರು ವಿಂಘಡನೆ ಕೇವಲ ಮಠಮಾನ್ಯಗಳಿಗೆ ಸೀಮಿತವಗಿಲ್ಲಾ,ಇದು ಸರ್ವವ್ಯಾಪಿಯಗಿ ಬೆಳೆದಿದೆ.ಕೆಲವು ಪಟ್ಟಬದ್ರ ಹಿತಾಸಕ್ತಿಗಳು ತಮ್ಮ ಬೇಳೆಬೇಯಿಸಿಕೊಳ್ಳಲು ಇದನ್ನು ಶಿಕ್ಷಣ,ರಾಜಕೀಯದಂತಹ ಮಹತ್ವದ ಕ್ಷೇತ್ರದಲ್ಲಿ ಹಬ್ಬಿಸುತ್ತಿದ್ದು , ಯೋಗ್ಯತೆ ಯನ್ನುವ ಪದ ಅರ್ಥಕಳೆದುಕೊಳ್ಳುತ್ತಿದೆ.

1 comment:

  1. ಇಂದಿಗೂ ಪ್ರಸ್ತುತ ವಿಷಯ.

    ReplyDelete