bi

href="http://www.freebiebitcoin.com">Earn

Sunday, January 2, 2011

ಶತಮಾನದ ಹೊಸ ಶಬ್ದ "ಹಿಂದು ಉಗ್ರಗಾಮಿ"




  ಪಿಟಿಐ.ಡಿ 20. ಹಿಂದು ಉಗ್ರಗಾಮಿ ಗಳಿಂದ  ಅಲ್ಪಸಂಕ್ಯಾತರ ಮೇಲೆ ಹಲ್ಲೆ  1 ಸಾವು............!!??? ಮುಂತಾದ ತಲೆಬರಹವುಳ್ಳ  ಸುದ್ದಿಗಳಿಂದು ಮಾದ್ಯಮಗಳಲ್ಲಿ  ಸರ್ವೆಸಾಮಾನ್ಯವಾಗಿ ಕಾಣಸಿಗುತ್ತಿವೆ ಈ ಬಗ್ಗೆ ಯಾರು ತಲೆಕೆಡಿಸಿಕೊಂಡಂತ್ತಿಲ್ಲ.!
  ಯಾರಿವರು?  ಯಲ್ಲಿಂದ ಉಧ್ಬವಿಸಿದರು?......... ಉಹೂಂ  ಗೊತ್ತಿಲ್ಲ,  ಈ ಶಬ್ದವನ್ನು ಉಪಯೋಗಿಸಿದ  ಮಾಧ್ಯಮದವರಿಗೆ ಗೊತ್ತಿಲ್ಲ!!!.  ರಾಮಮಂದಿರ ಗಲಾಟೆಯಿಂದ ಪ್ರಾರಂಬವಾಯಿತೆಂದು ಕೆಲವರು ಊಹಿಸಿದರೆ,

ಗುಜುರಾತ್ ಗಲಭೆಯಿಂದ ಪ್ರಾರಂಬವಾಯಿತೆಂದು ಕೆಲವರ ಅಂಬೋಣ.ಈ ಸಂಘಟನೆ ಯಾವುದು? ಯಾವ ಧೇಶಧ್ರೋಹ ಕಾರ್ಯದಲ್ಲಿ ನಿರತವಾಗಿದೆ?ಎಲ್ಲೆಲ್ಲಿ ಬಾಂಬ್ ಸಿಡಿಸಿದ್ದಾರೆ? ಯಾವ ವಿಮಾನ ಅಪಹರಿಸಿದ್ದಾರೆ?  ಯಾವುದಕ್ಕು ಮಾಹಿತಿಯಿಲ್ಲ.ಆದರು  ಈ ಶಬ್ದ  ಇಂದು ಸರ್ವೇಸಾಮಾನ್ಯ. ಈ ಶಬ್ದದ ಮೂಲವನ್ನು ಕೆದಕುತ್ತ ಹೋದರೆ ಬಿಚ್ಚಿಕೊಳ್ಳುವುದು ಭಾರತದ ರಾಜಕೀಯ ಪಕ್ಷಗಳ ಕರಾಳ ಇತಿಹಾಸ. ಅಧಿಕಾರದ ಲಾಲಸೆಗೆ ಬಿದ್ದ ರಾಜಕೀಯ ಪಕ್ಷಗಳು ವೋಟಿಗಾಗಿ ನಡೆಸಿದ ಶಡ್ಯಂತರದ ಫಲವೆ     "ಹಿಂದು ಉಗ್ರಗಾಮಿ". ಈ ಕೊಡಿಗೆಯನ್ನ ನೀಡಿದ್ದು  ಆಡಳಿತಾರೂಡ  ಕಾಂಗ್ರೇಸ್ ಪಕ್ಷ!!!
     ಸ್ವಾತಂತ್ರ್ಯಾಪೂರ್ವದಿಂದಲೂ ಅಲ್ಪಸಂಕ್ಯಾತರ ಮೇಲೆ ಒಲವು ಬೆಳೆಸಿಕೊಂಡ  ಕಾಂಗ್ರೇಸ್ ಪಕ್ಷ ಅಖಂಡ ಭಾರತದ ವಿಭಜನೆಗೆ ಕಾರಿಣೀಭೂತವಾಗಿರುವುದು ಈಗ ಇತಿಹಾಸವಾದರು, ಇದು ಇಂದಿಗೂ ಜ್ವಲಂತ ಸಮಸ್ಯೆಯಾಗೆ ಉಳಿದಿದೆ.ಸ್ವಾತಂತ್ರ್ಯಾನಂತರ ಆಡಳಿತಕ್ಕೆ ಬಂದ ಕಾಗ್ರೇಸ್  ವೋಟ್ ಬ್ಯಾಂಕ್ ರಾಜಕೀಯಕ್ಕಿಳಿಯಿತು.

ಮುಸ್ಲಿಮ್ ಯಾ ಕ್ರೈಸ್ತರಲ್ಲಿರುವ ಜನಾಂಗೀಯ ಒಗ್ಗಟ್ಟು  ಹಿಂದುಗಳಲ್ಲಿಲ್ಲದನ್ನು ಅರಿತ ಪಕ್ಷ ವೋಟಿಗಾಗಿ ಅಲ್ಪಸಂಕ್ಯಾತರ ಒಲೈಕೆಗಿಳಿಯಿತು.ಅದೇನೆ  ಇರಲಿ  ಪಕ್ಷದ ಆಂತರಿಕ ವಿಚಾರವೆನ್ನಬಹುದು,ಅದರೆ ಕೇವಲ ವೋಟಿನಾಸೆಗೆ  ಒಂದು ಜನಾಂಗವೆನ್ನೆ ಟೀಕಿಸುವ ನೀಚತನಕ್ಕಿಳಿದಿದ್ದು ಅಕ್ಷ್ಯಮ್ಯ ಅಪರಾಧ.ಇದಕ್ಕೆ ಸೂಕ್ತ ಊದಹರಣೆ ಅಂದರೆ ಇತ್ತೀಚೆಗೆ
ವಿಕಿಲೀಕ್ಸ್ ಬಹಿರಂಗ ಪಡಿಸಿದ ರಹಸ್ಯ ವರಧಿಯಲ್ಲಿ  ಕಾಂಗ್ರೇಸ್ ಯುವರಾಜ ರಾಹುಲ್ ಗಾಂಧಿ "ಭಾರತಕ್ಕೆ ಆಲ್ಕೈದದಂತಹ ಅಲ್ಪಸಂಕ್ಯಾತ ಉಗ್ರಗಾಮಿ ಸಂಘಟನೆಕ್ಕಿಂತ ಹಿಂದು ಉಗ್ರಗಾಮಿಗಳಿಂದ ಅಪಾಯವಿದೆ"ಯೆನ್ನುವ ನಿರ್ಲಜ್ಯ ಹೇಳಿಕೆಯನ್ನು  ಅಮೇರಿಕಕ್ಕೆ ರವಾನಿಸಿದ್ದು.
ಕೇವಲ 33 ವರ್ಷದ ಇಟಾಲಿ-ಇಂಡಿಯನ್ ಯುವಕನೊಬ್ಬ ಸಾವಿರಾರು ವರ್ಷದ ಭವ್ಯಪರಂಪರೆಯನ್ನು ಹೊಂದಿರುವ ಒಂದು ಧರ್ಮವನ್ನೆ ಟೀಕಿಸುವ ನೀಚತನಕ್ಕಿಳಿದಿದ್ದು ವಿಪರ್ಯಾಸವಾದರೂ ಇದು ಸತ್ಯವಾಗಿದೆ
    ಹಿಂದುಸ್ತಾನದಲ್ಲಿ ಹಿಂಧುಗಳನ್ನೆ ಅಲ್ಪಸಂಕ್ಯಾತರನ್ನಾಗಿಸಲು ಹೊರಟಿರುವ ಕಾಂಗ್ರೇಸಗೆ 125 ವರ್ಷತುಂಬುತ್ತಿದ್ದು ,ಈ ಸಂಧರ್ಬದಲ್ಲಿ ಆತ್ಮಾವಲೋಕನಮಾಡಿಕೊಳ್ಳಲು ಪ್ರಶಸ್ತ ಸಮಯವಾಗಿದೆ.ಬ್ರಿಟೀಶರು ಬಿಟ್ಟುಹೋದ "ವಿಭಜಿಸಿ ಆಳುವನೀತಿ"ಯನ್ನ ತ್ಯೇಜಿಸಿ ಅಖಂಡ ಭಾರತದ  ಅಭಿವ್ರಧ್ದಿಯತ್ತ ಗಮನಹರಿಸುವ ಕೆಲಸ ಕಾಂಗ್ರೇಸನಿಂದ ಆಗಬೇಕಾಗಿದೆ

2 comments: